News Karnataka Kannada
Tuesday, May 07 2024
ಚಾಮರಾಜನಗರ

ಚಾಮರಾಜನಗರ: ಸೆ.27ರಿಂದ ದಸರಾ ಕಾರ್ಯಕ್ರಮ

Chamarajanagar: Dasara to be held from Sept. 27
Photo Credit : By Author

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 27 ರಿಂದ 30 ರವರೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕವಿಗೋಷ್ಠಿ, ನಾಟಕಗಳ ಪ್ರದರ್ಶನ, ರಂಗಗೀತೆಗಳ ಗಾಯನ ಕಾರ್ಯಕ್ರಮಗಳು ನಡೆಯಲಿವೆ.

ಸೆ. 27 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕವಿಗೋಷ್ಠಿ, ಮಧ್ಯಾಹ್ನ 2ರಿಂದ 4 ರವರೆಗೆ ಚಾಮರಾಜನಗರದ ಆತ್ಮೀಯ ಪ್ರಯೋಗಾಲಯ ಟ್ರಸ್ಟ್ ಅವರಿಂದ ಮಾಧ್ಯಮ ವ್ಯಾಯೋಗ ಸಾಮಾಜಿಕ ನಾಟಕ, ಸಂಜೆ 4ರಿಂದ 6ರವರೆಗೆ ಕಲ್ಪವೃಕ್ಷ ತಂಡದವರಿಂದ ಯಥಾಪ್ರಕಾರ ಹಾಸ್ಯನಾಟಕ, 6 ರಿಂದ 7.30ರವರೆಗೆ ಮೈಸೂರು ಸಂಚಲನ ದೀಪಕ್ ತಂಡದಿಂದ ಕಂಚುಗನ್ನಡಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

ಸೆ. 28 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕವಿಗೋಷ್ಠಿ , ಮಧ್ಯಾಹ್ನ 2ರಿಂದ ಸಂಜೆ 4 ರವರೆಗೆ ಮೈಸೂರಿನ ನಿರಂತರ ಫೌಂಡೇಶನ್ ರವರಿಂದ ಸಾಯೋ ಆಟ ಸಾಮಾಜಿಕ ನಾಟಕ, ಸಂಜೆ 4ರಿಂದ 6ರವರೆಗೆ ಗುಂಡ್ಲುಪೇಟೆಯ ಬಿ.ಎಂ. ಸುರೇಶ್ ಮತ್ತು ತಂಡದಿಂದ ನಮ್ಮ ಗೌಡರು ಸಾಮಾಜಿಕ ನಾಟಕ, 6 ರಿಂದ 8ರವರೆಗೆ ಹನೂರಿನ ನಕ್ಷತ್ರ ಫೌಂಡೇಶನ್ ನಿಂದ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

ಸೆ. 29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೇಲಾಜಿಪುರದ ಗುರುಮಲ್ಲೇಶ್ವರ ಕಲಾ ಸಂಘದಿಂದ ವಿಕ್ರಮರಾಜ ಪೌರಾಣಿಕ ನಾಟಕ, ಮಧ್ಯಾಹ್ನ 1ರಿಂದ 1.30ರವರೆಗೆ ಎಂ. ಶಿವಶಂಕರ್ ಮತ್ತು ತಂಡದವರಿಂದ ರಂಗಗೀತೆ ಗಾಯನ, 1.30ರಿಂದ 4.30ರವರೆಗೆ ಉಮ್ಮತ್ತೂರು ಬಸವರಾಜು ಮತ್ತು ಗೆಳೆಯರ ಬಳಗದಿಂದ ಭಕ್ತ ಪ್ರಹ್ಲಾದ ನಾಟಕ, ಸಂಜೆ 4.30 ರಿಂದ 5.30ರವರೆಗೆ ಶಿವನಂಜಯ್ಯ, ಟಿ.ಎಸ್. ಶಿವಕುಮಾರ್, ವಿ. ಮಹದೇವಯ್ಯ (ಆಪು ಮಾಸ್ಟರ್), ವೆಂಕಟರಮಣಸ್ವಾಮಿ, ರಾಮಣ್ಣ, ಮನೋಜ್ ಮಸು ತಂಡದಿಂದ ರಂಗಗೀತೆ ಗಾಯನ, 5.30 ರಿಂದ 8ರವರೆಗೆ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಚಾಮರಾಜನಗರದ ಘಟಂ ಕೃಷ್ಣ ತಂಡದಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

ಸೆ.30ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಶ್ರೀ ಮಲೆಮಹದೇಶ್ವರ ಕಲಾ ಸಂಘದ ಗುರುಶಾಂತಪ್ಪ ಮತ್ತು ತಂಡದವರಿಂದ ಶಿವಶರಣ ಹರಳಯ್ಯ ನಾಟಕ, 1.30 ರಿಂದ 2 ರವರೆಗೆ ಮಂಗಲದ ಮಲ್ಲಿಕಾರ್ಜುನಸ್ವಾಮಿ ಮತ್ತು ತಂಡದವರಿಂದ ರಂಗಗೀತೆ ಗಾಯನ, ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಡಾ. ಬಿ.ಆರ್. ಅಂಬೇಡ್ಕರ್ ಕೃಪಾಪೋಷಿತ ನಾಟಕ ಮಂಡಳಿ ರಮೇಶ್ ಮತ್ತು ತಂಡದವರಿಂದ ಚಂದ್ರಮನ ಪರಿಭವ ನಾಟಕ ಪ್ರದರ್ಶನ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು