News Karnataka Kannada
Monday, April 29 2024
ಚಾಮರಾಜನಗರ

ಕಾಡಲ್ಲಿ ಒಟ್ಟಿಗೆ 5 ಚಿರತೆ ದರ್ಶನ- ರಸ್ತೆಯಲ್ಲಿ ಪಂಚ ವ್ಯಾಘ್ರ ಸಮೂಹ!

5 leopards spotted together in forest - Rasteli pancha tiger group
Photo Credit : News Kannada

ಬಂಡೀಪುರ: ಈಗ ಹುಲಿ- ಚಿರತೆಗಳ ಅವಾಸಸ್ಥಾನವಾಗಿದ್ದು ಒಂದಲ್ಲ ಎರಡಲ್ಲ ಒಟ್ಟೊಟ್ಟಿಗೆ 4-5 ಪ್ರಾಣಿಗಳು ದರ್ಶನ ಕೊಡುತ್ತಿದ್ದು ಪ್ರಾಣಿಪ್ರಿಯರು ರೋಮಾಂಚನಗೊಳ್ಳುತ್ತಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವೀಡಿಯೋ ತುಣುಕೊಂದನ್ನು X ನಲ್ಲಿ ಬಿಡುಗಡೆ ಮಾಡಿದ್ದು ಅದರಲ್ಲಿ ಬಂಡೀಪುರದಲ್ಲಿ ಒಟ್ಟಿಗೇ 5 ಚಿರತೆಗಳು ಫೋಟೋಗೆ ಫೋಸ್ ಕೊಡುವ ಅಪರೂಪದ ದೃಶ್ಯವನ್ನು ಶೇರ್ ಮಾಡಿದೆ.

ಶುಕ್ರವಾರ ರಾತ್ರಿ ಗುಂಡ್ಲುಪೇಟೆಯಿಂದ ಊಟಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದಾದ ನಂತರ ಒಂದರಂತೆ 5 ಹುಲಿಗಳು ರಸ್ತೆ ದಾಟುವ ದೃಶ್ಯ ಸೆರೆಯಾಗುವ ಮೂಲಕ ಬಂಡೀಪುರ ಹುಲಿ-ಚಿರತೆಗಳ ಬೀಡಾಗಿದೆ ಎನ್ನಬಹುದಾಗಿದೆ‌.

ವಾಹನ ಸವಾರರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ವ್ಯಾಘ್ರ ಸಮೂಹವನ್ನು ವಿಡಿಯೋ ಸೆರೆ ಹಿಡಿದಿದ್ದಾರೆ‌.
ರಸ್ತೆಯ ಎರಡೂ ಬದಿ ವಾಹನ ಇದ್ದರಿಂದ ಆತುರಾತುರವಾಗಿ 5 ಹುಲಿಗಳು ರಸ್ತೆ ದಾಟಿವೆ. ಒಟ್ಟಿನಲ್ಲಿ ಕಾಡಲ್ಲಿ ಚಿರತೆಗಳ ದರ್ಶನ- ರಸ್ತೆಯಲ್ಲಿ ವ್ಯಾಘ್ರ ಸಮೂಹ ಪರಿಸರ ಪ್ರೇಮಿಗಳಲ್ಲಿ ಉಲ್ಲಾಸ ಉಂಟುಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು