ಹೊಗೆನಕಲ್ ಫಾಲ್ಸ್ ಗೆ ಭೇಟಿ ನೀಡಿದ ಸುತ್ತೂರು ಶ್ರೀಗಳು

ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಯಾತ್ರ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟ ಸಮೀಪದ ಹೊಗೆನಕಲ್ ಫಾಲ್ಸ್‍ಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿ ಅವರು ಭೇಟಿ ನೀಡಿ ತೆಪ್ಪದ ಮೂಲಕ ತೆರಳಿ ಜಲಾಶಯದ ವೈಭೋಗವನ್ನು ವೀಕ್ಷಿಸಿದರು.

ಇದೇ ವೇಳೆ ಹೊಗೆನಕಲ್ ಫಾಲ್ಸ್‍ನ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೆ ಅಧಿಕಾರಿಗಳಿಗೆ ಇಲ್ಲಿಗೆ ಆಗಮಿಸುವ ಮಾದಪ್ಪನ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿಕೊಡಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. ಬಳಿಕ ಫಾಲ್ಸ್‍ನಲ್ಲಿ ಶ್ರೀಗಳು ಸಾಲೂರು ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರೊಂದಿಗೆ ತೆಪ್ಪದ ಮೂಲಕ ತೆರಳಿ ಜಲಾಶಯವನ್ನು ವೀಕ್ಷಿಸಿ ಕಣ್ತುಂಬಿಕೊಂಡರು.

ಇದಕ್ಕೂ ಮೊದಲು ಮಲೆಮಹದೇಶ್ವರಬೆಟ್ಟಕ್ಕೆ ಕಾವೇರಿ ನೀರು ಸರಬರಾಗುವ ಘಟಕಕ್ಕೆ ತೆರಳಿ ವೀಕ್ಷಿಸಿ ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಮಲೆಮಹದೇಶ್ವರಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ, ಡಿಎಫ್‍ಒ ಏಡುಕುಂಡಲು, ಅರಣ್ಯ ಇಲಾಖೆಯ ನೌಕರರು, ಪ್ರಾಧಿಕಾರದ ನೌಕರರು ಹಾಗೂ ಇನ್ನಿತರರು ಇದ್ದರು.

Swathi MG

Recent Posts

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

59 seconds ago

ಜೆಪಿ ನಡ್ಡಾ, ಬಿವೈ ವಿಜಯೇಂದ್ರಗೆ ಸಮನ್ಸ್‌ ಜಾರಿ ಮಾಡಿದ ಬೆಂಗಳೂರು ಪೊಲೀಸ್

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರಿಗೆ…

18 mins ago

ಹಳ್ಳಕ್ಕೆ ತಡೆಗೋಡೆ ನಿರ್ಮಾಣ: ತೆರವಿಗೆ ಆಗ್ರಹಿಸಿ ಮನವಿ

ಕೊಪ್ಪಾ ತಾಲೂಕಿನ ಕಾಡ್ಕೆರೆಯಲ್ಲಿ ಕುಡಿಯುವ ನೀರಿನ ಹಳ್ಳಕ್ಕೆ ಪ್ರಭಾವಿಗಳು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು…

52 mins ago

ಆನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ: ಪುಂಡಾನೆ ಪತ್ತೆಗೆ ಟ್ರ್ಯಾಪ್ ಕ್ಯಾಮೆರಾ

ಕಾಡಾನೆ ಹಾವಳಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ ಐದು ಜನ ಪ್ರಾಣ ಕಳೆದುಕೊಂಡಿದ್ದಾರೆ.

1 hour ago

ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಇಬ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಜೋಡಿ ಕೊಲೆ ಮಾಡಲಾದ ಘಟನೆ ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ನಡೆದಿದೆ.

1 hour ago

ರೈತರ ಕಷ್ಟ ಕೇಳುವವರಿಲ್ಲ: ವಿನಯ್ ಗುರೂಜಿ ವಿಷಾದ

ದೊಡ್ಡ ದೊಡ್ಡವರ ಕಷ್ಟ ಕೇಳಲು ದೊಡ್ಡ ದೊಡ್ಡವರಿದ್ದಾರೆ. ಆದರೆ ಜಗತ್ತಿಗೆ ಅನ್ನ ನೀಡುವ ರೈತನ ಕಷ್ಟ ಕೇಳುವ ಮನಸ್ಸು ದೊಡ್ಡವರಿಗಿಲ್ಲ…

2 hours ago