News Karnataka Kannada
Friday, May 03 2024
ಚಾಮರಾಜನಗರ

ಪಿರಿಯಾಪಟ್ಟಣ: ಮಹಿಳೆ ಸಾವು, ಗಂಡನ ಮೇಲೆ ಅನುಮಾನ

Bidar: Jescom employee dies of electrocution
Photo Credit : By Author

ಪಿರಿಯಾಪಟ್ಟಣ: ಮಹಿಳೆಯೊಬ್ಬಳು ಮಲಗಿದ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಕೋಗಿಲವಾಡಿ ವರ್ತಿ ಹಾಡಿಯಲ್ಲಿ ನಡೆದಿದ್ದು ಈ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ.

ಜೇನುಕುರುಬ ಜನಾಂಗದ ಹಾಡಿ ನಿವಾಸಿ ಸಾವಿತ್ರಿ(40) ಎಂಬ  ಮಹಿಳೆಮೃತಪಟ್ಟಿದ್ದು  ಆದರೆ ಆಕೆಯ ಪೋಷಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೃತ ಸಾವಿತ್ರಿ ಪತಿ ನಾಗಪ್ಪ ಮದ್ಯ ವ್ಯಸನದಿಂದಾಗಿ ನನ್ನ ಹೆಂಡತಿ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದರೆ, ಆಕೆಯ ತಂದೆ ರಘು ನನ್ನ ಮಗಳು ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದರಿಂದ ತನ್ನ ಅಳಿಯನ ಮೇಲೆ ಸಂಶಯವಿದ್ದು, ಈ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪಟ್ಟಣ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಜಗದೀಶ್, ಸಬ್ ಇನ್ಸ್ ಪೆಕ್ಟರ್ ಪುಟ್ಟರಾಜು ಮತ್ತು ಸಿಬ್ಬಂದಿ ಭೇಟಿ  ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು