News Karnataka Kannada
Sunday, April 28 2024
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿ 866 ಪ್ರಕರಣ, 358 ಮಂದಿ ಗುಣಮುಖ

Covid Corona
Photo Credit :

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ 2,460 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 866 ಜನರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಇವರಲ್ಲಿ 174 ಮಕ್ಕಳಿದ್ದಾರೆ.ಸಕ್ರಿಯ ಪ್ರಕರಣಗಳ ಸಂಖ್ಯೆ 4,558ಕ್ಕೆ ತಲುಪಿದೆ. ಸೋಂಕಿತರಲ್ಲಿ ಮೂವರು ಐಸಿಯುನಲ್ಲಿದ್ದು, 3,409 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು, ಕೋವಿಡ್‌ ಆಸ್ಪತ್ರೆ ಹಾಗೂ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ದಿನ 358 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಕರಣ ವರದಿಯಾಗಿಲ್ಲ.

ಗುರುವಾರ ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ ಗ್ರಾಮೀಣ ಭಾಗಗಳಲ್ಲಿ 652 ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ವರದಿಯಾಗಿವೆ. 214 ಪ್ರಕರಣಗಳು ನಗರ ಪ್ರದೇಶಗಳಲ್ಲಿ ದೃಢಪಟ್ಟಿವೆ.

ತಾಲ್ಲೂಕುವಾರು: ಚಾಮರಾಜನಗರ ತಾಲ್ಲೂಕಿನಲ್ಲಿ 388, ಗುಂಡ್ಲುಪೇಟೆಯಲ್ಲಿ 223, ಕೊಳ್ಳೇಗಾಲದಲ್ಲಿ 125, ಹನೂರಿನಲ್ಲಿ 108 ಹಾಗೂ ಯಳಂದೂರಿನಲ್ಲಿ 22 ಪ್ರಕರಣಗಳು ದೃಢಪಟ್ಟಿವೆ.

ಗುರುವಾರ ಗುಣಮುಖರಾದ 358 ಮಂದಿಯಲ್ಲಿ 61 ಮಕ್ಕಳಿದ್ದಾರೆ. ಚಾಮರಾಜನಗರ ತಾಲ್ಲೂಕಿನ 147 ಮಂದಿ, ಕೊಳ್ಳೇಗಾಲದ 88, ಹನೂರಿನ 51, ಗುಂಡ್ಲುಪೇಟೆಯ 36 ಹಾಗೂ ಯಳಂದೂರು ತಾಲ್ಲೂಕಿನ 34 ಹಾಗೂ ಹೊರಜಿಲ್ಲೆ ಇಬ್ಬರು ಸೋಂಕು ಮುಕ್ತರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 38,897 ಪ್ರಕರಣಗಳು ವರದಿಯಾಗಿವೆ. 33,793 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ ಹಾಗೂ ಕೋವಿಡ್‌ಯೇತರ ಕಾರಣಗಳಿಂದ 587 ಮಂದಿ ಕೊನೆಯುಸಿರೆಳೆದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು