ಮೈಸೂರು: ಬಹಿಷ್ಕಾರ ಹಿನ್ನೆಲೆ ಮಾರಾಮಾರಿ ಹಲ್ಲೆ ನಡೆದಿದ್ದು, ನಂಜನಗೂಡು ತಾಲ್ಲೂಕಿನ ಬಂಕಹಳ್ಳಿ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.
ರತ್ನಮ್ಮ ಹಾಗೂ ಕಿರಣ್ ಕುಮಾರ್ ಎಂಬುವರು ಹಲ್ಲೆಗೆ ಒಳಗಾಗಿದ್ದು, ನಂಜನಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರ ಕಾರ್ಯಕ್ಕೆ ಸೇರಿಸೋಲ್ಲ. ನಮ್ಮ ದಾಯದಿ ಯೊಬ್ಬರು ಮರಣವಾದಾಗ ನೋಡಲು ಬಿಡಲಿಲ್ಲ.
ಮಾತೆತ್ತಿದರೆ ತಪ್ಪುಹಣ ಕಟ್ಟುಸಿಕೊಳ್ಳುವ ಗ್ರಾಮದ ಮುಖಂಡರು. ದಂಡ ಕಟ್ಟೋಲ್ಲ ಎಂದಿದಕ್ಕೆ ಅಣ್ಣನ ಎರಡು ಕುಟುಂಬಗಳನ್ನು ಬಹಿಷ್ಕಾರ ಹಾಕಿದರು. ಬಹಿಷ್ಕಾರ ಹಾಕಿ 2 ವರ್ಷ ಕಳೆದು ಯಾರಿಗೂ ಹೇಳಿಕೊಳ್ಳಲಾಗದೆ ಜಿಗುಪ್ಸೆಯಿಂದ ಜೀವನ ನಡೆಸುತ್ತಿದ್ದಾರೆ.
ಅಣ್ಣನ ರಕ್ಷಣೆಗೆ ಬಂದ ರತ್ನಮ್ಮ ಳ ಮೇಲೆ ಹಲ್ಲೆ ಮಾಡಿದ್ದಾರೆ ಕ್ರಮ ಜರುಗಿಸಿ ನ್ಯಾಯ ಕೊಡಿಸಿಕೊಡಬೇಕೆರಂದು ನೊಂದ ಮಹಿಳೆ ರತ್ನಮ್ಮ ಹೇಳಿದ್ದಾರೆ. ಪ್ರಕರಣ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

