ನಂಜನಗೂಡು: ಗ್ರಾಮದೇವತೆ ಜಾತ್ರೇಲಿ ಕುಡಿದು ಗಲಾಟೆ ಮಾಡಿದ್ರೆ, ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ 30 ಸಾವಿರ ದಂಡ ವಿಧಿಸುವ ವಾರ್ನಿಂಗ್ ನೀಡಲಾಗಿದೆ. ನಂಜನಗೂಡು ತಾಲ್ಲೂಕು ಗೋಳೂರು ಗ್ರಾಮದಲ್ಲಿ ಡಂಗುರ ಭಾರಿಸಿ ಎಚ್ಚರಿಕೆ ನೀಡಲಾಗಿದೆ.

ಗ್ರಾಮ ದೇವತೆ ಜಾತ್ರೆ ವೇಳೆ ಯಾವುದೇ ರೀತಿಯ ವಿಡಿಯೋ ಮಾಡಿದ್ರೆ ದಂಡ ಫಿಕ್ಸ್ ಆಗಿದೆ. ನಾಳೆ ಅಂದ್ರೆ ಫೆ10 ರಿಂದ ಮೂರು ದಿನಗಳ ಕಾಲ ಗೋಳೂರು ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ನೆರವೇರಲಿದೆ.

ಹೆಣ್ಣುಮಕ್ಕಳ ವಿಡಿಯೋ ತೆಗೆಯುವುದು ಅಥವಾ ಕುಡಿದು ಗಲಾಟೆ ಮಾಡುವ ವಿಚಾರದಲ್ಲಿ ಗ್ರಾಮದ ಮುಖಂಡರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಯಾವುದೇ ರೀತಿ ವಿಡಿಯೋ ಮಾಡಲು ಅವಕಾಶವಿಲ್ಲ. ಗ್ರಾಮದ ನಿವಾಸಿ ಚಕ್ರಜವರ ಎಂಬುವರ ಮೂಲಕ ತಮಟೆ ಭಾರಿಸಿ ಗ್ರಾಮದಲ್ಲಿ ಡಂಗುರ ಸಾರಿಸಿದ್ದಾರೆ.