ನಂಜನಗೂಡು: ಮಾ.30 ರಂದು ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ನಂಜನಗೂಡಿನಲ್ಲಿ ಗರಳಪುರಿ ಉತ್ಸವವನ್ನು ಇದೆ ಮೊಟ್ಟ ಮೊದಲ ಬಾರಿಗೆ ಆಯೋಜಿಸಲಾಗಿದೆ.
ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರ ಸಾರಥ್ಯದಲ್ಲಿ ಮಾ. 29ರಂದು ನಂಜನಗೂಡು ಪಟ್ಟಣದಲ್ಲಿ ಆರೋಗ್ಯಕರ ಜೀವನಕ್ಕೆ ಒಂದು ಹೆಜ್ಜೆ ಎಂಬ ಶೀರ್ಷಿಕೆಯಲ್ಲಿ ವಾಕ್ ಥಾನ್ ಏರ್ಪಡಿಸಲಾಗಿದೆ.
ಶಾಸಕ ದರ್ಶನ್ ಧ್ರುವನಾರಾಯಣ್ ವಾಕ್ ಥಾನ್ ಪೋಸ್ಟರ್ ಬಿಡುಗಡೆಗೊಳಿಸಿದರು. ನಂತರ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ದೇಬೂರು ಅಶೋಕ್ ಮತ್ತು ಎಂ.ಡಿ ಬಾಲರಾಜು ಹಾಗೂ ಮುಳ್ಳೂರು ಮಹದೇವಸ್ವಾಮಿ ಹಾಜರಿದ್ದರು.

