ಮೈಸೂರು : ಇನ್ಸ್‌ಪೆಕ್ಟರ್ ಧನಂಜಯ ಧಮ್ಕಿಗೆ ಸವಾಲ್ ಹಾಕಿದ್ದು, ಇಂದು ಟಿ. ನರಸೀಪುರದಲ್ಲಿ ಗಣಪತಿ ಶೋಭಾಯಾತ್ರೆ ನಡೆಯಲಿದೆ.
ದಲಿತ ಸಂಘಟನೆಗಳಿಂದ ಸೌಹಾರ್ದ ನಡಿಗೆ ನಡೆಯಲಿದ್ದು, ಒಂದೇ ದಿನ ಒಂದೇ ರಸ್ತೆಯಲ್ಲಿ ಎರಡು ಯಾತ್ರೆ ನಡೆಯಲಿದೆ. ಟಿ. ನರಸೀಪುರದಲ್ಲಿ ಹೈ ಅಲರ್ಟ್ ಇರಲಿದ್ದು, ಬೆಳಗ್ಗೆ ಸೌಹಾರ್ದ ನಡಿಗೆ, ಸಂಜೆ ಗಣಪತಿ ಶೋಭಾಯಾತ್ರೆ ನಡೆಯಲಿದೆ.
ಟಿ. ನರಸೀಪುರದಲ್ಲಿ ಬಿಗಿ ಭದ್ರತೆ ಇರಲಿದ್ದು, ಲಿಂಕ್ ರಸ್ತೆಯಲ್ಲಿ ಇಂದು ಮಹಾ ಮೆರವಣಿಗೆ ನಡೆಯಲಿದೆ. ಮಸ್ಜಿದ್-ಇ-ನೂರ್ ಮಸೀದಿ ಬಳಿ ಪೊಲೀಸರ ಕಟ್ಟೆಚ್ಚರ ವಹಿಸಲಿದ್ದಾರೆ. ಮಸೀದಿ ಸುತ್ತಲೂ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಧನಂಜಯ ಎಚ್ಚರಿಕೆ ನಡುವೆಯೇ ಲಿಂಕ್ ರಸ್ತೆಯಲ್ಲಿ ಶೋಭಾಯಾತ್ರೆ. ಟಿ. ನರಸೀಪುರದಲ್ಲಿ ಖಾಕಿ ಹೈ ಅಲರ್ಟ್ ಇರಲಿದೆ.
ಸೌಹಾರ್ದ ನಡಿಗೆಗೆ ಸಿದ್ಧತೆ, ಶೋಭಾಯಾತ್ರೆಗೂ ಸಜ್ಜಾಗಲಿದ್ದು, ಟಿ. ನರಸೀಪುರದಲ್ಲಿ ಲಿಂಕ್ ರಸ್ತೆಯೇ ಕೇಂದ್ರಬಿಂದುವಾಗಿದೆ. ಟಿ. ನರಸೀಪುರದ ಲಿಂಕ್ ರಸ್ತೆಯಲ್ಲಿ ಪೊಲೀಸ್ ಹದ್ದಿನಕಣ್ಣು ಇರಲಿದೆ.

