ಮೈಸೂರು: ನೋಟ್ ಬುಕ್ ಹರಿದದ್ದಕ್ಕೆ ತಾಯಿಯೇ ತನ್ನ ಮಗುವನ್ನು ಮನೆಯ ಹೊರಗೆ ನಾಯಿಯ ಬೋನಿನಲ್ಲಿ ಬಂಧಿಸಿ ಶಿಕ್ಷಿಸಿರುವ ಕ್ರೂರ ಘಟನೆ ಮೈಸೂರಿನ ಶಿವರಾತ್ರೀಶ್ವರ ಬಡಾವಣೆಯಲ್ಲಿ ನಡೆದಿದೆ.
ಮೈಸೂರಿನ ಶಿವರಾತ್ರೀಶ್ವರ ಬಡವಾಣೆಯಲ್ಲಿ ವಾಸಿಸುತ್ತಿರುವ ಯಹತೇರಾ ಎಂಬ ಮಹಾತಾಯಿಯೇ ತನ್ನ ಐದು ವರ್ಷದ ಮೊದಲನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಫಿದಾಗೆ ಇಂತಹದೊಂದು ಶಿಕ್ಷೆ ನೀಡಿದ್ದಾರೆ. ಬಾಲಕಿ ಒಂದನೇ ತರಗತಿಗೆ ಓದುತ್ತಿದ್ದು, ಬಾಲಕಿ ನೋಟ್ ಪುಸ್ತಕವನ್ನು ಶಾಲೆಯಲ್ಲಿ ಹರಿದು ಹಾಕಿದ್ದಾರೆ. ಅದರಲ್ಲೇ ಮನೆಗೆ ಬಂದ ಬಾಲಕಿಯನ್ನು ಕಂಡ ತಾಯಿ ಮುದ್ದು ಕಂದ ಫಿದಾ ಮೇಲೆ ಕೆಂಡಾಮಂಡಲವಾಗಿ ಕಿಡಿಕಾರಿದ್ದಾರೆ. ಅಷ್ಟಕ್ಕೆ ಮುಗಿಯದೇ ಆಕೆಯನ್ನು ಮನಬಂದಂತೆ ಥಳಿಸಿ ಮನೆಯಿಂದಲೇ ಹೊರದಬ್ಬಿದ್ದಾರೆ. ಮುದ್ದು ಕಂದ ತಪ್ಪಾಯಿತಮ್ಮ ಎಂದು ಎಷ್ಟೇ ಕೇಳಿಕೊಂಡರು ಕರಗದ ತಾಯಿಯ ಮನಸ್ಸಿನಿಂದ ಕೊನೆಗೆ ಮಗು ಅಳುತ್ತಾಲೆ ಬಾಗಿಲು ಕಾದಿದೆ.
ನಡುರಾತ್ರಿಯಲ್ಲಿ ಮಗುವಿನ ಚಿರಾಟ ಕೇಳಿದ ಅಕ್ಕ-ಪಕ್ಕದ ಮನೆಯವರು ಬಂದು ಬಾಗಿಲು ತೆಗೆಯುವಂತೆ ಹೇಳಿದರು ಸಹ ಖ್ಯಾರೆ ಎನ್ನದ ಆಕೆ ಬಾಗಿಲು ತೆಗೆಯಲೆ ಇಲ್ಲ. ಕೊನೆಗೆ ಮಗುವಿನ ಗೋಳಾಟ ನೋಡಲಾಗದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ಸಮಾಧಾನಪಡಿಸಿ ಬಾಗಿಲು ತೆಗೆಯುವಂತೆ ತಾಯಿಗೆ ತಿಳಿಸಿದ್ದಾರೆ. ಆದರೆ ಪೊಲೀಸರ ಮಾತಿಗೂ ಕಿಂಚ್ಚಿತ್ತು ಮನ ಕರಗದ ತಾಯಿ ಯಹತೇರಾ ಮುಂಜಾನೆಯೇ 6 ಗಂಟೆಯವರೆಗೂ ಬಾಗಿಲನ್ನೇ ತೆರೆಯದೇ ಮಗುವು ರಾತ್ರೀಯಿಡೀ ಬಾಗಿಲಲ್ಲೇ ಉಳಿಯುವ ಶಿಕ್ಷೆ ನೀಡಿದ್ದಾರೆ.