ಮೈಸೂರು: ನೂತನವಾಗಿ ಮೈಸೂರು ಜಿಲ್ಲಾ ಪಂಚಾಯ್ತಿಗೆ ಅಧ್ಯಕ್ಷೆಯಾಗಿ ಜೆಡಿಎಸ್ ನ ಪರಿಮಳ ಶ್ಯಾಮ್, ಉಪಾಧ್ಯಕ್ಷೆಯಾಗಿ ಗೌರಮ್ಮ ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೈಸೂರು ನಿಲ್ಲಾ ಪಂಚಾಯ್ತಿ ನಲ್ಲಿ ಬಿಜೆಪಿ ಜತೆ ಮೈತ್ರಿ ಕಡಿದುಕೊಂಡು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದು, ಇದೀಗ ಜೆಡಿಎಸ್ ನ ಪರಿಮಳ ಶ್ಯಾಮ್ ಅಧ್ಯಕೆಯಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ ಸ್ಥಾನಕ್ಕೆ ಪರಿಮಳಾ ಶ್ಯಾಮ್ ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮೈತ್ರಿಗೆ ಬಹುಮತ ಇರುವ ಹಿನ್ನೆಲೆಯಲ್ಲಿ ಉಪಾಧ್ಯಕೆ ಸ್ಥಾನಕ್ಕೆ ಗೌರಮ್ಮ ಸೋಮಶೇಖರ್ ಅವರು ಆಯ್ಕೆಯಾಗಿದ್ದಾರೆ.