ಮೈಸೂರು: ಮಹಿಳೆ ಹೊಟ್ಟೆಯಲ್ಲಿದ್ದ 12 ಕೆಜಿ ನೀರುಗಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ.
ನಗರದ ಶ್ರೀ ದೇವಿ ನರ್ಸಿಂಗ್ ಹೋಂಗೆ ಶುಕ್ರವಾರ ಬೆಳಗ್ಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ.ಶಾಂತಿನಗರದ ಸಲ್ಮಾಳನ್ನು ಪರೀಕ್ಷಿಸಿದ ವೈದ್ಯರು ಹೊಟ್ಟೆಯಲ್ಲಿ ಬೃಹತ್ ಗಾತ್ರದ ಗಡ್ಡೆ ಇರುವುದು ಕಂಡುಬಂದಿದೆ. ತಕ್ಷಣ ಆಪರೇಷನ್ ಮಾಡಿ ಗಡ್ಡೆಯನ್ನು ಹೊರ ತೆಗೆದಿದ್ದಾರೆ. ರೋಗಿ ಈಗ ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.