News Karnataka Kannada
Sunday, May 19 2024
ಮೈಸೂರು

ಬಾಲ್ಯ ವಿವಾಹ ತಡೆಗಟ್ಟಲು ಇಲಾಖೆಗಳ ನಡುವೆ ಸಮನ್ವಯತೆ ಮುಖ್ಯ: ರಂದೀಪ್ ಡಿ

Photo Credit :

ಬಾಲ್ಯ ವಿವಾಹ ತಡೆಗಟ್ಟಲು ಇಲಾಖೆಗಳ ನಡುವೆ ಸಮನ್ವಯತೆ ಮುಖ್ಯ: ರಂದೀಪ್ ಡಿ

ಮೈಸೂರು: ಬಾಲ್ಯ ವಿವಾಹ ತಡೆಗಟ್ಟಲು ಇಲಾಖೆಗಳ ನಡುವೆ ಸಮನ್ವಯತೆ ಮುಖ್ಯ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಚಿಸಿರುವ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಭಾಗವಹಿಸಿದ ಸಾಂತ್ವನ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ದೂರು ದಾಖಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಎಫ್.ಐ.ಆರ್ ದಾಖಲಿಸುವ ಬಗ್ಗೆ ಹಾಗೂ ಬಾಲ್ಯ ವಿವಾಹದ ಬಗ್ಗೆ ದಾಖಲಿಸುವ ದೂರುಗಳ ಬಗ್ಗೆ ಕೈಗೊಂಡ ಕ್ರಮಗಳು ಸರಿಯಾಗಿ ತಿಳಿಯುವುದಿಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಶಿಕ್ಷಣ ಇಲಾಖೆ ಅವರು ಒಟ್ಟಿಗೆ ಸಭೆ ನಡೆಸಬೇಕು. ಬಾಲ್ಯವಿವಾಹ ತಡೆಗಟ್ಟಲು ತಾಲ್ಲೂಕು, ಜಿಲ್ಲಾ ಹಾಗೂ ಗ್ರಾಮ ಮಟ್ಟದಲ್ಲಿ ತಂಡ ರಚಿಸಿ. ತಂಡದಲ್ಲಿ ಪ್ರತಿಯೊಬ್ಬರಿಗೆ ನಿಗಧಿತವಾದ ಕೆಲಸವನ್ನು ಹಂಚಿಕೆ ಮಾಡಿ ಜವಾಬ್ದಾರಿ ನೀಡಿ ಎಂದರು.

ಬಾಲ್ಯವಿವಾಹ ತಡೆಗಟ್ಟಿದ ಸಂದರ್ಭ, ಬಾಲ್ಯ ವಿವಾಹ ನಡೆದಿರುತ್ತದೆ ದಾಖಲೆಗಳು ಇರುವುದಿಲ್ಲ, ಬಾಲ್ಯ ವಿವಾಹದ ಬಗ್ಗೆ ದೂರು ಬರುತ್ತದೆ ಸ್ಥಳಕ್ಕೆ ತಲುಪುವುದರಲ್ಲಿ ಬಾಲ್ಯ ವಿವಾಹ ನಡೆದು ಹೋಗಿರುತ್ತದೆ ಬಾಲ್ಯ ವಿವಾಹವಾದ ಹುಡುಗಿ ಹಾಗೂ ಪೋಷಕರು ಸಿಗುತ್ತಾರೆ. ಈ ಮೂರು ಸನ್ನಿವೇಶವನ್ನು ಮನದಲ್ಲಿಟ್ಟಿಕೊಂಡು ಸಭೆ ನಡೆಸಿ. ಎಫ್.ಐ.ಆರ್. ದಾಖಲಿಸುವವರು ಯಾರು, ಸಾಕ್ಷಿ ದೊರೆಯದಿದ್ದಲ್ಲಿ ಅಲ್ಲಿಯ ಸುತ್ತಮುತ್ತಲಿನ ಜನರಿಂದ ಯಾವ ರೀತಿ ದಾಖಲೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ಇಲಾಖೆಗಳಿಗೆ ಕೆಲಸ ನಿಗಧಿ ಮಾಡಿ ಎಂದರು.

ಪ್ರತಿ ಮೂರು ತಿಂಗಳಿಗೊಮ್ಮೆ ತಾಲ್ಲೂಕು ಮಟ್ಟದಲ್ಲೂ ಸಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಸಮಿತಿಗಳ ಸಭೆಯನ್ನು ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆಸಬೇಕಿರುತ್ತದೆ. ಆದರೆ ಇದು ನಡೆಯುತ್ತಿಲ್ಲ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರೆ ಬಹಳಷ್ಟು ಸಮಸ್ಯೆಗಳು ತಾಲ್ಲೂಕು ಹಂತದಲ್ಲೇ ಪರಿಹಾರವಾಗುತ್ತದೆ ಎಂದರು.

ಕುರಿಮಂಡಿಯಲ್ಲಿ ಹಾಗೂ ಗುಜರಿಗಳಲ್ಲಿ ಬಾಲಕಾರ್ಮಿಕರು ಕಾರ್ಯ ನಿರ್ವಹಿಸುತ್ತಿರುವುದಾಗಿ ಕೆಲವು ಸಂಸ್ಥೆಗಳು ಸಭೆಗೆ ಮಾಹಿತಿ ನೀಡಿದಾಗ ಜಿಲ್ಲಾಧಿಕಾರಿಗಳು ಮಾತನಾಡಿ ಮೊದಲು ಬಾಲಕಾರ್ಮಿಕರು ಇವರು ಸ್ಥಳಗಳನ್ನು ಪತ್ತೆ ಮಾಡಿ. ಆ ಸ್ಥಳಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಮಕ್ಕಳ ಮನವೊಲಿಸಿ ಶಾಲೆಗೆ ಕರೆತನ್ನಿ. ಅಂಗಡಿ ಮಾಲೀಕರಿಗೂ ಸಹ ಬಾಲಕಾರ್ಮಿಕರನ್ನು ನಿಯೋಜಿಸಿಕೊಳ್ಳದಂತೆ ತಿಳಿಸಿ. ಅರಿವು ಮೂಡಿಸಿದ ನಂತರವು ಅಂಗಡಿ ಮಾಲೀಕರು ಬಾಲಕಾರ್ಮಿಕರನ್ನು ನಿಯೋಜಿಸಿಕೊಂಡರೆ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಿ ಎಂದರು.

ಮಕ್ಕಳ ಸಹಾಯವಾಣಿಗೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 141 ಕರೆಗಳು ಬಂದಿದ್ದು, ಅವರುಗಳಲ್ಲಿ 99 ಪ್ರಕರಣಗಳು ಮಾತ್ರ ಬಾಲ್ಯ ವಿವಾಹಕ್ಕೆ ಸಂಬಂಧಿಸಿರುತ್ತದೆ. ಅವುಗಳಲ್ಲಿ 63 ಬಾಲ್ಯ ವಿವಾಹವನ್ನು ತಡೆಗಟ್ಟಲಾಗಿದೆ. 12 ಪ್ರಕರಣಗಳು ಬೇರೆ ಜಿಲ್ಲೆಗಳಿಗೆ ಸಂಬಂಧಿಸಿದ್ದು ಬೇರೆ ಜಿಲ್ಲೆಗಳ ಚೈಲ್ಡ್ ಲೈನ್ ಗೆ ವಹಿಸಲಾಗಿದೆ. 4 ಪ್ರಕರಣಗಳು ಬಾಲ್ಯವಿವಾಹವಾಗಿರುವುದಿಲ್ಲ ಎಂದು ದೃಢೀಕರಿಸಿದೆ. ಇನ್ನುಳಿದ ಪ್ರಕರಣಗಳಲ್ಲಿ ಬಾಲ್ಯ ವಿವಾಹವಾದ ಸ್ಥಳಕ್ಕೆ ಹೋದಾಗ ಯಾರು ಸಹ ದೊರೆತಿರುವುದಿಲ್ಲ ಎಂದು ಮಕ್ಕಳ ಸಹಾಯವಾಣಿಯ ಸಮನ್ವಯಾಧಿಕಾರಿ ಧನಂಜಯ ಅವರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧ, ಜಿಲ್ಲಾ ಮಹಿಳಾ ಅಭಿವೃದ್ಧಿ ಅಧಿಕಾರಿ ಪದ್ಮ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶೀಲ ಖರೆ, ಮೈಸೂರು ಮಹಾನಗರಪಾಲಿಕೆ ಹೆಚ್ಚುವರಿ ಆಯುಕ್ತ ರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಆರ್.ಬಸಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು