ಮೈಸೂರು: ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಾಸಗಿ ಸ್ಟಾರ್ ಹೋಟೆಲ್ ನಲ್ಲಿ ಸ್ವತಃ ಕೇಕ್ ಮಿಕ್ಸಿಂಗ್ ಮಾಡುವ ಮೂಲಕ ಬೃಹತ್ ಕೇಕ್ ತಯಾರಿಕೆಗೆ ಚಾಲನೆ ನೀಡಿದರು.
ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ತಿಂಗಳಷ್ಟೇ ಬಾಕಿ ಇದ್ದು, ಸಾಂಸ್ಕೃತಿಕ ನಗರಿ ಹಾಗೂ ಪ್ರವಾಸಿಗರ ನಗರಿ ಮೈಸೂರು ಸಜ್ಜಾಗುತ್ತಿದ್ದು ಇದರ ಅಂಗವಾಗಿ ಈಗಾಗಲೇ ಎಲ್ಲಾ ಸ್ಟಾರ್ ಹೋಟೆಲ್ ಗಳಲ್ಲಿ ಕೇಕ್ ತಯಾರಿಕೆಗೆ ಮಿಕ್ಸಿಂಗ್ ಕಾರ್ಯ ನಡೆಯುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಗರದ ಖಾಸಗಿ ಸ್ಟಾರ್ ಹೋಟೆಲ್ ನಲ್ಲಿ ಸ್ವತಃ ಬಾಣಸಿಗರ ಜೊತೆ ಸೇರಿಕೊಂಡು ಕೇಕ್ ಮಿಕ್ಸಿಂಗ್ ನಲ್ಲಿ ಪಾಲ್ಗೊಂಡರು.
ಕೇಕ್ ಮಿಕ್ಸಿಂಗ್ ವಿವಿಧ ಬಗೆಯ ಡ್ರೈ ಫ್ರೋಡ್ಸ್, ಚೆರಿ, ಬೇಕರಿಯ ಪಾದರ್ಧಗಳು ಹಾಗೂ ವಿವಿಧ ಬಗೆಯ ದುಬಾರಿ ಮದ್ಯಗಳನ್ನ ಹಾಕಿ ಮಿಕ್ಸಿಂಗ್ ಮಾಡಲಾಯಿತು. ಒಂದು ತಿಂಗಳ ಕಾಲ ಸಂಸ್ಕರಿಸಿ ನಂತರ ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ಬೃಹತ್ ಗಾತ್ರದ ಕೇಕ್ ತಯಾರಿಸುತ್ತಾರೆ. ಕೇಕ್ ಮಿಕ್ಸಿಂಗ್ ನಲ್ಲಿ ಪಾಲ್ಗೊಂಡ ಚಾಲೆಂಜಿಂಗ್ ದರ್ಶನ ಮಿಕ್ಸಿಂಗ್ ಕಾರ್ಯ ಮುಗಿದ ನಂತರ ಬಾಣಸಿಗರ ಜೊತೆ ಸೆಲ್ಫೆ ಫೋಟೋ ತೆಗೆದು ಸಂಭ್ರಮಿಸಿದರು.