News Karnataka Kannada
Sunday, May 19 2024
ಮೈಸೂರು

ಕಬಿನಿ ಹಿನ್ನೀರಲ್ಲಿ ಕಂಡುಬಂದ ಅಪರೂಪದ ಅತಿಥಿ ದೈತ್ಯ ಗಜ

Photo Credit :

ಕಬಿನಿ ಹಿನ್ನೀರಲ್ಲಿ ಕಂಡುಬಂದ ಅಪರೂಪದ ಅತಿಥಿ ದೈತ್ಯ ಗಜ

ಮೈಸೂರು: ಕಬಿನಿ ಜಲಾಶಯದ ಹಿನ್ನೀರು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಸೌಂದರ್ಯವನ್ನು ಸವಿಯಲೆಂದು ಜನ ಇತ್ತ ದೌಡಾಯಿಸಿದರೆ, ಪಕ್ಕದ ನಾಗರಹೊಳೆ ಅಭಯಾರಣ್ಯದಿಂದ ವಿವಿಧ ಪ್ರಾಣಿಗಳು, ಪಕ್ಷಿಸಂಕುಲಗಳು ನೀರು ಕುಡಿದು ದಣಿವಾರಿಸಿಕೊಳ್ಳಲು ಬರುತ್ತವ

ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಹಿನ್ನೀರಿನಲ್ಲಿ ಪ್ರಾಣಿಗಳ ದಂಡುಗಳು ಕಂಡು ಬರುತ್ತವೆ. ಇವು ಎಲ್ಲ ದಿನಗಳಲ್ಲಿ ಕಾಣಲು ಅಸಾಧ್ಯ. ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ಮಾತ್ರ ಕಂಡು ಬರುತ್ತದೆ. ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಡ್ಡಾಡುವುದರಿಂದ ಪ್ರತಿದಿನವೂ ಇಲ್ಲಿಗೆ ಬಾರದೆ ಆಗಾಗ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸುತ್ತಿವೆ.

ಸಾಮಾನ್ಯವಾಗಿ ನೀರು ಕುಡಿಯಲು ಕಾಡಾನೆಗಳು ಹಿಂಡು ಹಿಂಡಾಗಿ ಬರುತ್ತವೆ. ಆದರೆ ಭಾರೀ ಗಾತ್ರದ, ಉದ್ದದ ಕೋರೆಯ ಕಾಡಾನೆಯೊಂದು ಅಪರೂಪಕ್ಕೆ ಕಾಣಿಸಿಕೊಂಡು ಗಮನಸೆಳೆಯುತ್ತಿದೆ.

ತನ್ನ ಪಾಡಿಗೆ ತಾನಾಯಿತು ಎಂಬಂತೆ ಅರಣ್ಯದಲ್ಲಿ ಸುತ್ತಾಡುತ್ತಾ ಆಗೊಮ್ಮೆ, ಈಗೊಮ್ಮೆ ಕಬಿನಿ ಹಿನ್ನೀರಿನಲ್ಲಿ ನೀರು ಕುಡಿದು ಅರಣ್ಯದತ್ತ ಹೆಜ್ಜೆ ಹಾಕುವ ಈ ಆನೆ ಹಲವರಿಗೆ ಕುತೂಹಲದ ಪ್ರಾಣಿಯಾಗಿ ಕಾಣುತ್ತಿದೆ. ಕಾರಣ ಇದು ಎಲ್ಲ ಆನೆಗಳಂತೆ ಇಲ್ಲ. ಒಂದಷ್ಟು ವಿಭಿನ್ನವಾಗಿಯೂ, ಧೈತ್ಯಕಾರವಾಗಿಯೂ ಇರುವ ಈ ಆನೆಯ ವೈಶಿಷ್ಟ್ಯ ಏನೆಂದರೆ ಉದ್ದವಾದ ಕೋರೆಗಳು. ಇಷ್ಟೊಂದು ಉದ್ದದ ಕೋರೆಗಳು ಆನೆಗಳಿಗೆ ಇರುವುದು ಅಪರೂಪ ಆದರೆ ಈ ಆನೆಗೆ ಅದುವೇ ಭೂಷಣ.

ಸಾಮಾನ್ಯವಾಗಿ ಇತ್ತ ಕಡೆ ಬರುವ ಪ್ರವಾಸಿಗರು ತಮ್ಮ ಕ್ಯಾಮರಾಕ್ಕೆ ಆ ಕಾಡಾನೆ ಸಿಗುತ್ತಾ ಎಂದು ಕುತೂಹಲದಿಂದ ಕಾಯುತ್ತಾರೆ. ಒಂದು ವೇಳೆ ಸಿಕ್ಕರೆ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ.

ಅರಣ್ಯ ಇಲಾಖೆಗಳ ಮೂಲಗಳು ತಿಳಿಸುವಂತೆ ಈ ಆನೆಗೆ ಅಂದಾಜು 70ವರ್ಷ ವಯಸ್ಸಿರಬಹುದಂತೆ. ಇದರ ಕೋರೆ ಅಂದಾಜು 4 ಅಡಿ ಇದೆಯಂತೆ. ದೈತ್ಯ ದೇಹ ಹೊಂದಿದ ಈ ಆನೆಯ ಹಣೆಭಾಗ ಅಗಲವಾಗಿ, ಕಿವಿಯು ಮೊರದಗಲವಿದೆ.

ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗುವ ಈ ಆನೆಯ ನಡಿಗೆಯಲ್ಲಿಯೂ ಗಾಂಭೀರ್ಯತೆಯಿದೆ. ನಾಡಿಗೆ ಬಂದು ಉಪಟಳ ಮಾಡಿದ ನಿದರ್ಶನವಿಲ್ಲ. ಹಿಂಡಿನೊಂದಿಗೆ ಮೊದಲೆಲ್ಲ ಕಾಣಿಸಿಕೊಳ್ಳುತ್ತಿದ್ದಾದರೂ ಇತ್ತೀಚೆಗೆ ಹೆಚ್ಚಾಗಿ ಏಕಾಂಗಿಯಾಗಿ ಮೇವು ತಿನ್ನುತ್ತಾ, ನೀರು ಕುಡಿಯುತ್ತಾ ಸಾಗುತ್ತಿರುತ್ತದೆ ಎನ್ನಲಾಗಿದೆ.

ಹಾಗೆ ನೋಡಿದರೆ ಇವತ್ತು ವಿವಿಧ ಆನೆ ಶಿಬಿರಗಳಲ್ಲಿ ಕಾಣಸಿಗುವ ಆನೆಗಳ ಪೈಕಿ ಹೆಚ್.ಡಿ.ಕೋಟೆಯ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಸೆರೆ ಸಿಕ್ಕ ಆನೆಗಳೆಲ್ಲವೂ ದೈತ್ಯ ಗಾತ್ರ ಹೊಂದಿದ ಆನೆಗಳಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು