News Karnataka Kannada
Wednesday, May 01 2024
ಮೈಸೂರು

ಉಕ್ರೇನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದವರ ನೆರವಿಗೆ ಜೆಎಸ್ ಎಸ್

Untitled 201
Photo Credit : News Kannada

ಮೈಸೂರು: ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮತ್ತು ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಅಂತಾರಾಷ್ಟ್ರೀಕರಣ ಮತ್ತು ಶೈಕ್ಷಣಿಕ ಸಹಾಯ ನೀಡುವ ಯೋಜನೆಯ ಭಾಗವಾಗಿ ಉಕ್ರೇನ್, ರಷ್ಯಾ, ಚೀನಾ, ಮುಂತಾದ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ತೊಂದರೆಗೊಳಗಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದೆ.

ಸುತ್ತೂರು ಶ್ರೀ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿಯವರ ಸೂಚನೆಯಂತೆ ವ್ಯಾಸಂಗಕ್ಕೆ ಅವಕಾಶ ನೀಡಲು ಮುಂದಾಗಿದ್ದು, ಈ ಸಹಾಯ ಕಾನೂನು ರೀತ್ಯಾ ಅನುಮತಿಸಲಾದ ಸೇತುಬಂಧ (ಬ್ರಿಡ್ಜಿಂಗ್) ಶಿಕ್ಷಣದ ಸ್ವರೂಪದಲ್ಲಿರುತ್ತದೆ.  ವಿದ್ಯಾರ್ಥಿಗಳು ವಿದೇಶದಲ್ಲಿ ಯಾವ ಸೆಮೆಸ್ಟರ್, ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದರು ಎಂಬ ಅಂಶದ ಮೇಲೆ ತರಬೇತಿ ನೀಡಲಾಗುವುದು.

ಇದಕ್ಕಾಗಿ ಸ್ಕಿಲ್ ಲ್ಯಾಬ್ ಮತ್ತು ವರ್ಚುಯಲ್ ಕೇಸ್ ಸನ್ನಿವೇಶಗಳನ್ನು ಬಳಸಿಕೊಂಡು ಥಿಯರಿ ಮತ್ತು ಪ್ರಾಕ್ಟಿಕಲ್ ತರಗತಿಗಳನ್ನು ನಡೆಸಿ, ಕ್ಲಿನಿಕಲ್ ಅಧ್ಯಯನಕ್ಕಾಗಿ ಸೂಕ್ತ ಕೌಶಲ್ಯ ತರಬೇತಿ ಒದಗಿಸಲಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.  ಅದರೆ, ಅವರು, ಊಟ ಮತ್ತು ವಸತಿಗಾಗಿ ಅವರದೇ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಕಾರ್ಯಕ್ರಮವನ್ನು ತೊಂದರೆಗೆ ಒಳಗಾಗಿರುವ ವಿದ್ಯಾರ್ಥಿಗಳಿಗಾಗಿ ತಾತ್ಕಾಲಿಕ ಶೈಕ್ಷಣಿಕ ಬೆಂಬಲವಾಗಿ ಮಾತ್ರ ನೀಡಲಾಗುವುದು. ಬ್ರಿಡ್ಜ್ ಕೋರ್ಸ್ ಸೌಲಭ್ಯವನ್ನು ಬಳಸಿಕೊಳ್ಳಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಮೈಸೂರು ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ಔಷಧಿ ವಿಭಾಗದ ಸಹಪ್ರಾಧ್ಯಾಪಕ ಡಾ.ಡಿ.ಸುನಿಲ್ ಕುಮಾರ್ ಅವರನ್ನು ಮೊಬೈಲ್ ಸಂ.6366366663ನ್ನು ಸಂಪರ್ಕಿಸಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು