ಪುತ್ತೂರು: ಕೇರಳದಲ್ಲಿ ಈ ಬಾರಿ ಬಿಜೆಪಿಗೆ ಡಬಲ್ ಡಿಜಿಟ್ ಸಂಖ್ಯೆಯಲ್ಲಿ ಸ್ಥಾನ ಸಿಗಲಿದೆ ಎಂದು ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಹೇಳಿಕೆ ನೀಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ 20℅ ಮತ ಪಡೆದಿದೆ. ಅಲ್ಲದೇ ತ್ರಿಶೂರ್ ನಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಕೇರಳದಿಂದ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯನ್ನ ಜಯಭೇರಿಗೊಳಿಸಿ ಕಳುಹಿಸಿದ್ದೇವೆ. ಹಾಗೆಯೇ ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಉತ್ತಮ‌ ಸ್ಥಾನ ಪಡೆಯಲಿದೆ.

ನಮ್ಮದು ಹಿಂದುತ್ವದ ಪಕ್ಷ ಕರ್ನಾಟಕ, ಕರಾವಳಿ, ಕೇರಳ ಅಂತೇನಿಲ್ಲ. ಎಲ್ಲರಿಗೂ ಗೊತ್ತಿರೋದೆ ಬೇಸಿಕ್ ಐಡಿಯಾಲಜಿ ಬಿಜೆಪಿ ಅಂದ್ರೆ ಹಿಂದುತ್ವ. ಬಿಜೆಪಿ ಸಂಸದ ಸುರೇಶ್ ಗೋಪಿ ಬೀಫ್ ತಿನ್ನೋದ್ರಲ್ಲಿ ತಪ್ಪಿಲ್ಲ ಅನ್ನೋ ಹೇಳಿಕೆ ವಿಚಾರವಾಗಿ ಅದು ಅವರ ವೈಯಕ್ತಿಕ ಹೇಳಿಕೆ ಸಾಮೂಹಿಕ ಅಲ್ಲ ಎಂದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಹೇಳಿದರು.

View this post on Instagram

A post shared by News Karnataka (@newskarnataka)