ಮಂಗಳೂರು: ದಸರಾ ಪ್ರಯುಕ್ತ, ಮಣ್ಣಗುಡ್ಡ ಪರಿಸರದ ಖಾಸಗಿ ಜಾಗದಲ್ಲಿ ಅವತಾರ್ ಟೈಗರ್ಸ್ ತಂಡದ ವತಿಯಿಂದ ಐದನೇ ವರ್ಷದ ಊದು ಪೂಜಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಈ ಸಂದರ್ಭದಲ್ಲಿ ಉದ್ಯಮಿ ಹಾಗೂ ಕೊಡುಗೈ ದಾನಿ ಅಲ್ವಿನ್ ಜೋಯೆಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ಮಾತನಾಡಿದ ಉದ್ಯಮಿ ಹಾಗೂ ಕೊಡುಗೈ ದಾನಿ ಅಲ್ವಿನ್ ಜೋಯೆಲ್ ಅವರು, ಅವತಾರ್ ಟೈಗರ್ಸ್ ತಂಡದ ಕಾರ್ಯವನ್ನು ಶ್ಲಾಘಿಸಿ, ತಂಡದ ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು.

