ನವದೆಹಲಿ: ಖ್ಯಾತ ನಟ ರಜನಿಕಾಂತ್ ಅಭಿನಯದ ಹೊಸ ಸಿನಿಮಾ `ಜೈಲರ್ 2′ ವೀಕ್ಷಣೆಗೆ ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಇಡೀ ಥಿಯೇಟರ್ ಬುಕ್ ಮಾಡಿದ್ದು, ಸಹ-ಆಟಗಾರರು ಭಾಗಿಯಾಗುವ ಸಾಧ್ಯತೆಯಿದೆ.
ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರಿಗೆ ನಟ ರಜನಿಕಾಂತ್ ಅಂದರೆ ತುಂಬಾ ಇಷ್ಟ. ಹೀಗಾಗಿ ರಜನಿಕಾಂತ್ ಅಭಿನಯದ ಹೊಸ ಸಿನಿಮಾ `ಜೈಲರ್ 2′ ರಿಲೀಸ್ ಆಗಿರುವ ಹಿನ್ನೆಲೆ ಸಿನಿಮಾ ನೋಡಲು ಸಂಜು ಸ್ಯಾಮ್ಸನ್ ಅವರು ಇಡೀ ಥಿಯೇಟರ್ ಬುಕ್ ಮಾಡಿದ್ದಾರೆ. ಈ ವೇಳೆ ಸ್ಯಾಮ್ಸನ್ ಅವರ ಕುಟುಂಬ, ಸ್ನೇಹಿತರು ಮತ್ತು ತಂಡದ ಸಹ ಆಟಗಾರರು ಭಾಗಿಯಾಗುವ ನಿರೀಕ್ಷೆಯಿದೆ.
ಈ ಬಗ್ಗೆ ಸಂಜು ಸ್ಯಾಮ್ಸನ್ ಅವರು ಮಾತನಾಡಿ, ನನಗೆ ರಜಿನಿ ಸರ್ ಅವರ ಸಿನಿಮಾಗಳನ್ನು ನೋಡುವುದೆಂದರೆ ತುಂಬಾ ಇಷ್ಟ. ನಾನು ಯಾವಾಗಲೂ ಅವರ ಮುಂದಿನ ಚಿತ್ರಕ್ಕಾಗಿ ಕಾಯುತ್ತಿರುತ್ತೇನೆ. ಆದರೆ ಇಂದು, ಅದೃಷ್ಟವಶಾತ್, ಇಡೀ ಥಿಯೇಟರ್ ಅನ್ನು ಬುಕ್ ಮಾಡಲು ನನಗೆ ಅವಕಾಶ ಸಿಕ್ಕಿತು. ನನ್ನ ಸ್ನೇಹಿತರನ್ನು ಆಹ್ವಾನಿಸಿದ್ದೇನೆ. ದೊಡ್ಡ ಪರದೆಯ ಮೇಲೆ ರಜಿನಿ ಸರ್ ಅವರನ್ನು ನೋಡೋದು ತುಂಬಾ ರೋಮಾಂಚನವಾಗಿದೆ. ತಮಿಳು ಭಾಷೆ ತಿಳಿದಿರುವ ತಂಡದ ಪ್ರತಿಯೊಬ್ಬರೂ ಬರಲಿದ್ದಾರೆ ಎಂದು ಹೇಳಿದ್ದಾರೆ.

