ಮಂಗಳೂರು: ಮುಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಕೋಣದ ಮಾಲಕರಿಗೆ ಹಣಕ್ಕಾಗಿ ಪೀಡಿಸಿ, ಹಲ್ಲೆಗೆ ಯತ್ನಿಸಿದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆ ಎಂಬಲ್ಲಿ ನಡೆದಿದೆ.
ದನಗಳನ್ನು ಕಡಿಯಲು ಕೊಡ್ತೀಯಲ್ವಾ ಎಂದು ಹಫ್ತಾ ಮೂವರು ಆರೋಪಿಗಳು ಕೇಳಿದ್ದಾರೆ. ಅಂಗಾರಗುಡ್ಡೆ ಕೆಂಚನಕೆರೆ ನಿವಾಸಿ ಶಂಸುದ್ದೀನ್ ಎಂಬವರ ಮನೆಗೆ ಮೂವರು ಆರೋಪಿಗಳು ನುಗ್ಗಿದ್ದಾರೆ.
ಶ್ಯಾಮಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಮತ್ತು ಸುವೀನ್ ಕಾಂಚನ್ ಸೇರಿ ಹಫ್ತಾ ನೀಡವಂತೆ ಬೆದರಿಕೆ ಹಾಕಿದ್ದಾರೆ. ಮುಂಬಯಿಯಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೆ ಸೇರಿದ ಗದ್ದೆ, ತೋಟ, ಜಾಗ ಮತ್ತು ಮನೆಯನ್ನು ಶಂಸುದ್ದೀನ್ ನೋಡಿಕೊಳ್ಳುತ್ತಿದ್ದರು.
ಮುಲ್ಕಿಯ ಅರಸು ಕಂಬಳದಲ್ಲಿ ಶಂಸುದ್ದೀನ್ ತಂದಿದ್ದ ಕೋಣಗಳಿಗೆ ಬಹುಮಾನ ಸಿಕ್ಕಿತ್ತು. ಬಹುಮಾನವಾಗಿ ಸಿಕ್ಕಿ ಬಂಗಾರದ ಸರದ ಜೊತೆಗೆ ಹಣ ಕೊಡಬೇಕೆಂದು ಬೆದರಿಕೆ ಹಾಕಿ ಮೂವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಆರೋಪಿಗಳನ್ನು ತಡೆದು ಸ್ಥಳೀಯ ನಿವಾಸಿಗಳು ಓಡಿಸಿದ್ದಾರೆ.
ಘಟನೆಯ ಕುರಿತು ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿ ಶ್ಯಾಮಸುಂದರ್ ಶೆಟ್ಟಿ ಮತ್ತು ಅಕ್ಷಯ್ ಪೂಜಾರಿ ಮತ್ತು ಸುವೀನ್ ಕಾಂಚನ್ ಎಂಬವರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

