ಮಂಗಳೂರು: ನಾಡಿನ ಸಮಸ್ತ ಜನರಿಗೆ ಸ್ಪೀಕರ್ ಯು ಟಿ ಖಾದರ್ ಅವರು ಈದುಲ್ ಫಿತ್ ಹಬ್ಬದ ಶುಭಾಶಯ ಕೋರಿದ್ದಾರೆ.
ಒಂದು ತಿಂಗಳ ಪವಿತ್ರ ರಮಝಾನ್ ಉಪವಾಸದ ಬಳಿಕ ಬಂದಿರುವ ಈದುಲ್ ಫಿತ್ ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ತರಲಿ. ಜಾಗತಿಕವಾಗಿ ಇತ್ತೀಚೆಗೆ ಸೃಷ್ಟಿಯಾಗಿರುವ ಸಂಘರ್ಷದ ವಾತಾವರಣ ತಿಳಿಯಾಗಲಿ, ಶಾಂತಿ ನೆಲೆಸಲಿ, ಸಂಕಷ್ಟ ಪೀಡಿತರಿಗೆ ನೆರವು ಸಿಗಲಿ ಎಂದು ಸ್ಪೀಕರ್ ಯು ಟಿ ಖಾದರ್ ಅವರು ಶುಭ ಹಾರೈಸಿದ್ದಾರೆ.

