ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಬಹುತೇಕ ರಸ್ತೆ ಅಪಘಾತಗಳಿಗೆ ವಾಹನ ಸವಾರರ ಅತಿಯಾದ ವೇಗ ಮತ್ತು ಅಜಾಗರೂಕತೆಯೇ ಮುಖ್ಯ ಕಾರಣವಾಗಿದೆ. “ವೇಗಕ್ಕಿಂತ ಜೀವನ ಮುಖ್ಯ” ಎಂಬ ಮಾತನ್ನು ಮರೆತು, ಅತೀ ವೇಗವಾಗಿ ವಾಹನ ಚಲಾಯಿಸುವುದು ಕೇವಲ ಚಾಲಕನಿಗೆ ಮಾತ್ರವಲ್ಲದೆ ರಸ್ತೆಯಲ್ಲಿ ಸಾಗುವ ಇತರ ಪಾದಚಾರಿಗಳಿಗೂ ಪ್ರಾಣಾಪಾಯವನ್ನು ತಂದೊಡ್ಡುತ್ತಿದೆ.
ಮೊಬೈಲ್ ಬಳಕೆ, ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ಅಜಾಗರೂಕತೆಯಿಂದಾಗಿ ಅಮಾಯಕ ಜೀವಗಳು ಬಲಿಯಾಗುತ್ತಿವೆ. ನಿಮ್ಮ ಒಂದು ಕ್ಷಣದ ನಿರ್ಲಕ್ಷ್ಯವು ಇಡೀ ಕುಟುಂಬವನ್ನು ಕತ್ತಲಿಗೆ ತಳ್ಳಬಹುದು ಎಂಬ ಎಚ್ಚರಿಕೆ ಇರಲಿ.

