ಮಂಗಳೂರು: ಎಸ್‌ಡಿಪಿಐ ಗೆ ಸಚಿವ ಜಮೀರ್ ಫಂಡಿಂಗ್ ಆರೋಪ ವಿಚಾರವಾಗಿ ಮಂಗಳೂರಿನಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆ ನೀಡಿದ್ದಾರೆ. ಜಮೀರ್ ಅಹಮ್ಮದ್ ಒಂದು ರಾಜಕೀಯ ಪಕ್ಷದ ಮಂತ್ರಿ. ಅವರು ನಮಗೆ ಯಾಕೆ ಫಂಡಿಂಗ್ ಮಾಡ್ತಾರೆ.?. ನಾವು ಕ್ರೌಡ್ ಫಂಡಿಂಗ್ ಮೂಲಕ ಚುನಾವಣೆ ನಡೆಸೋದು. ನಮಗೆ ನಮ್ಮ ಕಾರ್ಯಕರ್ತರು ಹಣ ಕೊಡ್ತಾರೆ ಎಂದರು.
ಜನ ನಮಗೆ ನೋಟು ಕೊಟ್ಟಿದ್ದಾರೆ, ವೋಟು ಕೊಟ್ಟಿದ್ದಾರೆ. ಆ ರೀತಿ ಫಂಡಿಂಗ್ ತೆಗೆದುಕೊಳ್ಳುವ ಸಿಸ್ಟಮ್ ನಮ್ಮಲ್ಲಿ ಇಲ್ಲ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 70% ಅಹಿಂದ ಮತಗಳಿವೆ. ಇದರಲ್ಲಿ 38% ಮುಸ್ಲಿಂ ಮತಗಳಿವೆ. ಕಾಂಗ್ರೆಸ್ ನಲ್ಲಿ ಮುಸ್ಲಿಂ ನಾಯಕರಿಗೆ ಟಿಕೇಟ್ ಕೊಡಿ ಅಂತಾ ಅಲ್ಲಿನವರು ಕೇಳಿದ್ರು. ಆದ್ರೆ ಟಿಕೇಟ್ ಕೊಡದಿದ್ದಾಗ ಜನ ರೊಚ್ಚಿಗೆದ್ರು ಎಂದರು.
ಕಾಂಗ್ರೆಸ್ ನ ವಿರುದ್ಧ ದೊಡ್ಡ ಮೊತ್ತದ ಮತವನ್ನು ಜನ ಚಲಾಯಿಸಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಮುಸ್ಲಿಂ ನಾಯಕತ್ವವನ್ನು ಒಡೆದಾಳುವ ನೀತಿ ಮಾಡ್ತಿದೆ. ಇದು ಗಂಭೀರವಾದ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗುತ್ತೆ. ಅಲ್ಪಸಂಖ್ಯಾತ ನಾಯಕರ ಮೇಲೆ ಮಾತ್ರ ಕಾಂಗ್ರೆಸ್ ಶಿಸ್ತುಕ್ರಮ ತೆಗೆದುಕೊಳ್ಳುತ್ತೆ. ಬಲಾಢ್ಯರ ಮೇಲೆ ಶಿಸ್ತು ಕ್ರಮ ಆಗಲ್ಲ. ಕಾಂಗ್ರೆಸ್ ಕೇವಲ ಮುಸ್ಲಿಂ ನಾಯಕರನ್ನೇ ಡಾರ್ಗೆಟ್ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆ ನಡೆದಿಲ್ಲ. ರಾಜ್ಯ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಬದ್ಧತೆ ಇಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದರು.

