ಮಂಗಳೂರು : ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ೧೪೭ ಡಾಲರ್‌ಗಳಿಗೆ ಏರಿಕೆಯಾಗಿದ್ದ ಸಂದರ್ಭದಲ್ಲೂ ಯುಪಿಎ ಸರ್ಕಾರ ಪೆಟ್ರೋಲ್ ಬೆಲೆಯನ್ನು ೬೨ ರೂಪಾಯಿಗೇ ನೀಡಿತ್ತು.

ಕೊರೊನಾ ಸಂದರ್ಭದಲ್ಲಿ ಬ್ಯಾರೆಲ್‌ಗೆ ೨೩ ಡಾಲರ್‌ಗೆ ಇಳಿದಿದ್ದರೂ, ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ೭೦ ರೂ.ಗಿಂತ ಕಡಿಮೆ ನೀಡಿಲ್ಲ. ಇರಾನ್ ಯುದ್ಧದ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ೫೮ರಿಂದ ೭೦ ಡಾಲರ್‌ಗಳ ನಡುವೆ ಇದ್ದರೂ ದೇಶದಲ್ಲಿ ತೈಲ ಬೆಲೆ ೧೧೦ ರೂ.ಗೆ ಏರಿಸಲಾಗಿದೆ ಎಂದು ಪದ್ಮರಾಜ್ ದೂರಿದರು.

ದೇಶದಲ್ಲಿ ಅರಾಜಕತೆಯ ವಾತಾವರಣ ನಿರ್ಮಾಣವಾಗಿದ್ದು, ಜನರು ದಂಗೆ ಏಳುವ ಪರಿಸ್ಥಿತಿ ಎದುರಾಗಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆಯೂ ಪತ್ರಿಕಾಗೋಷ್ಠಿ ನಡೆಸುವ ಧೈರ್ಯ ತೋರಿಲ್ಲ. ಇದರಿಂದ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು. ಬಿಜೆಪಿ ಆಡಳಿತದ ಅಂತ್ಯಕಾಲ ಆರಂಭವಾಗಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವನ್ನು ಆಡಳಿತ ಪಕ್ಷದ ಅನುಕೂಲಕ್ಕೆ ತಕ್ಕಂತೆ ನಡೆಸಲಾಗುತ್ತಿದೆ. ರಾಷ್ಟ್ರೀಯ ವಾಹಿನಿಗಳು ಕೂಡ ಆಡಳಿತ ಪಕ್ಷದ ಸೊತ್ತಿನಂತಾಗಿವೆ ಎಂದು ಪದ್ಮರಾಜ್ ಆರೋಪಿಸಿದರು.

ಮುಖಂಡರಾದ ನೀರಜ್‌ಪಾಲ್, ಟಿ.ಕೆ.ಸುಧೀರ್, ಅಪ್ಪಿ, ನಝೀರ್ ಬಜಾಲ್, ಸಲೀಂ, ಉದಯ ಕುಂದರ್, ಪ್ರಕಾಶ್ ಸಾಲಿಯಾನ್ ಸುದ್ದಿಗೋಷ್ಠಿಯಲ್ಲಿದ್ದರು.