ಮಂಗಳೂರು : ದ ಸಾಫ್ರಾನ್ ಫ್ರಂಟ್ ನೇತೃತ್ವದಲ್ಲಿ ‘ಜಾಗೃತ ಸಂತ- ಉದ್ಧೃತ ಭಾರತ‘ ಎಂಬ ಘೋಷ ವಾಕ್ಯದೊಂದಿಗೆ ವೀರ ಸಂತರ ‘ಸ್ಮೃತಿ ದಿವಸ್‘ ಆಚರಣೆ ಹಾಗೂ ಗೋಪಾಷ್ಟಮಿ ಪ್ರಯುಕ್ತ ಸಾರ್ವಜನಿಕ ಗೋಪೂಜೆ ಕದ್ರಿ ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಲ್ಲಿ ಒಬ್ಬರಾದ ವಿನಯ್ ಗುರೂಜಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
1966ರ ನ.6ರಂದು ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಹೊಸ ದಿಲ್ಲಿಯ ಸಂಸತ್ ಭವನದ ಎದುರು ಗೋಪಾಷ್ಟಮಿಯ ಪುಣ್ಯದಿನದಂದು ಧರ್ಮ ಸಾಮ್ರಾಟ್ ಸ್ವಾಮಿ ಶ್ರೀ ಕರಪಾತ್ರಿ ಮಹಾರಾಜ್ ಅವರ ನೇತೃತ್ವದಲ್ಲಿ ನಡೆದ ಚಳುವಳಿಯಲ್ಲಿ ಲಕ್ಷಾಂತರ ಸಂತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಾವಿವಾರು ಸಂಖ್ಯೆಯಲ್ಲಿ ಸಾಧು ಸಂತರ ಮಾರಣ ಹೋಮ ನಡೆದಿದ್ದು, ಇತಿಹಾಸದಲ್ಲಿ ಹುದುಗಿ ಹೋಗಿರುವ ಕರಾಳ ಸತ್ಯವಾಗಿದೆ. ಘಟನೆ ನಡೆದು 60 ವರ್ಷ ಕಳೆದರೂ ಇನ್ನೂ ಬೇಡಿಕೆ ಈಡೇರದಿರುವುದು ದುರಾದೃಷ್ಟದ ಸಂಗತಿ. ಸಂತರ ಬಲಿದಾನವನ್ನು ನೆನಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗಿದ್ದು ಭವ್ಯ ವೇದಿಕೆಯಲ್ಲಿ ಸಾಧು ಸಂತರು ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲಾಯಿತ್ತು

