ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯವರ ಚಿಕ್ಕ ಜಾತ್ರಾ ಮಹೋತ್ಸವವು ನವೆಂಬರ್ 22ರಿಂದ 27ರವರೆಗೆ ಅದ್ಧೂರಿಯಾಗಿ ಜರುಗಲಿದೆ.

ನವೆಂಬರ್ 22-2026 ರ ಭಾನುವಾರ ಸಂಜೆ 7 ಗಂಟೆಗೆ ಶ್ರೀಕಂಠಮುಡಿ ಉತ್ಸವ, ನವೆಂಬರ್ 25-2026 ರ ಬುಧವಾರ ಬೆಳಿಗ್ಗೆ 9 ಗಂಟೆ 20 ನಿಮಿಷದಿಂದ 10 ಗಂಟೆಯೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯವರ ಮಹಾರಥೋತ್ಸವ ಜರುಗಲಿದೆ.

ಇನ್ನು ನವೆಂಬರ್ 27-2026 ರ ಶುಕ್ರವಾರ ಸಂಜೆ 7 ಗಂಟೆಗೆ ಪವಿತ್ರ ಕಪಿಲಾ ನದಿಯಲ್ಲಿ ಶ್ರೀಕಂಠೇಶ್ವರಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ.

ಈ ಪುಣ್ಯಕರ ಚಿಕ್ಕ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ನಂಜುಂಡೇಶ್ವರ ಸ್ವಾಮಿಯವರ ದರ್ಶನ ಪಡೆದು, ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ವಿನಂತಿಸಿದೆ.

ದೇವಾಲಯದ ವತಿಯಿಂದ ಪ್ರತಿದಿನ ನಡೆಯುವ ಅನ್ನದಾಸೋಹಕ್ಕೆ ಭಕ್ತಾದಿಗಳು ದವಸ ಧಾನ್ಯ, ಇತರೆ ಪದಾರ್ಥಗಳು ಹಾಗೂ ನಗದು ರೂಪದಲ್ಲಿ ಸೇವೆ ಸಲ್ಲಿಸಬಹುದು.