ಮಂಗಳೂರು : ರೆಹಮಾನ್ ಹತ್ಯೆ ಕೇಸ್ ನಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಗೆ ನೋಟೀಸ್ ವಿಚಾರವಾಗಿ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ.

ಪೊಲೀಸ್ ನೋಟೀಸ್ ನನ್ನ ಕೂದಲಿಗೆ ಸಮ. ನನ್ನ ಮೇಲೆ 110 ಕೇಸ್ ಇದೆ, ಇದ್ಯಾವ ಲೆಕ್ಕ. ಸಂವಿಧಾನದ ಕೊಟ್ಟ ಸ್ವಾತಂತ್ರ್ಯದ ಮೇಲೆ ಫೋನ್ ಮಾಡಿ ಮಾತನಾಡಿದ್ದೇನೆ. ನಾನು ಫೋನ್ ಮಾಡಿ ಮಾತನಾಡಿದ್ದು ಹೌದು, ನಾನೇನು ಕೊಲೆ ಮಾಡಿ ಅಂತಾ ಮಾತನಾಡಿದ್ದೇನಾ.?. ನಾನು ಮಾತನಾಡಿದ ರೆಕಾರ್ಡ್ ಅವರಲ್ಲಿ ಇದೆ ಅಲ್ವಾ.?, ಅದರಲ್ಲೇ ಏನಿದೆ ಅಂತಾ ಗೊತ್ತಿಲ್ವಾ ಎಂದರು.

ನಾನು ಯಾಕೆ ವಿಚಾರಣೆಗೆ ಹಾಜರಾಗಬೇಕು, ನನಗೆ ಸಮಯ ಕೊಡುಲು ಅವರ್ಯಾರು‌.?. ನಾವ್ಯಾರು ಆ ಹತ್ಯೆಯ ಪ್ರತಿಪಾದನೆ ಮಾಡಲ್ಲ, ಆದರೆ ಅದರಲ್ಲಿ ಇಲ್ಲದವರ ಮೇಲೆ ಕೇಸ್ ಹಾಕಿದ್ರು, ಕಾನೂನು ಬಿಟ್ಟು ಗೃಹಮಂತ್ರಿ, ಮುಖ್ಯಮಂತ್ರಿ ಹೇಳ್ತಾರೆ ಅಂತ ನಮ್ಮ ದಮನ ಬೇಡ. ಇವರ ಅಧಿಕಪ್ರಸಂಗ, ಅವರ ಚೇಲಾಗಳಾಗಿ ಕೆಲಸ ಮಾಡ್ತಾ ಇದಾರೆ. ನನ್ನ ಮೇಲೆ 110 ಕೇಸ್ ಇದೆ, ಇದು ಒಂದು ಕೂದಲಿನ ಹಾಗೆ ಎಂದರು.

View this post on Instagram

A post shared by News Karnataka (@newskarnataka)