ಮಂಗಳೂರು : ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ ವಿಚಾರವಾಗಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. SIT ರಚನೆ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ನಮಗೆ SIT ಬಗ್ಗೆ ಸಣ್ಣ ಸಂಶಯ ಇದೆ, ಎಸ್ ಐ ಟಿ ರಚನೆಯಾಗಿರೋದು ಒಳ್ಳೇದು ಎಂದರು.

SIT ಯಲ್ಲಿರೊ ಎಲ್ಲಾ ಅಧಿಕಾರಿಗಳು ಪರಿಪೂರ್ಣ ಇಲ್ಲ ಅನ್ನೋ ಸಂಶಯ ಬಂದಿದೆ. ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಒಳ್ಳೆ ಕಮಿಷನರ್. ಅವರು ಆ ಕಡೆ ಈ ಕಡೆ ಹೋಗ್ಲಿಕ್ಕಿಲ್ಲ, ಆದರೆ ಉಳಿದವರ ಬಗ್ಗೆ ನಮಗೆ ಸಂಶಯ ಇದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ಮಾಡಲಿ. 14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ. ಬೇರೆ ಯಾವುದೇ ಪ್ರಕರಣ ಈ ರೀತಿಯಾಗಿಲ್ಲ, ನ್ಯಾಯಕೊಡುವ ಕೆಲಸ ಮಾಡಲಿ ಎಂದರು.

SIT ಯವರ ಬಳಿ ನನ್ನ ವಿನಂತಿ, ಅಧಿಕಾರಿಗಳು ಆ ಕಡೆ ಈ ಕಡೆ ನೋಡದೆ. ಸತ್ಯ ಏನೆಂದು ಹುಡುಕಲಿ, ನೂರಕ್ಕೆ ನೂರು ಸತ್ಯ ಸಿಗುತ್ತದೆ. ಕೋರ್ಟ್ ಈ ಬಾರಿ ಸ್ಪಷ್ಟವಾಗಿ ಹೇಳಿದೆ, ಸಂತೋಷ್ ರಾವ್ ನನ್ನ ಸೇರಿಸಬೇಡಿ. ಈ ಹಿಂದಿನ ಅಧಿಕಾರಿಗಳನ್ನು ಸೇರಿಸಬೇಡಿ ಎಂದು. ಅಪರಾಧಿಗಳನ್ನ ಹುಡುಕುವ ತಾಕತ್ತು ಪೊಲೀಸರಿಗೆ ಇದೆ. ಮಂಗಳೂರು ಕಮಿಷನರ್ ರೀತಿಯ ಬಲವಾದ ಇನ್ನೊಂದಷ್ಟು ಅಧಿಕಾರಿಗಳನ್ನ ಇಟ್ಟುಕೊಳ್ಳಬೇಕಿತ್ತು. SIT ತಂಡದಲ್ಲಿ ಇಟ್ಟುಕೊಳ್ಳಬೇಕಿತ್ತು, ಜನರಿಗೆ ವಿಶ್ವಾಸ ಬರ್ತಾ ಇತ್ತು ಎಂದರು.

ಉಳಿದವರು ಏನು ಅಂತಾ ಜನರಿಗೂ ಗೊತ್ತು ನಿಮಗೂ ಗೊತ್ತಿದೆ. ಆ ರೀತಿಯ ಸಣ್ಣ ಒಂದು ಗೊಂದಲ ಇದೆ. ಬಂಟ್ವಾಳ ದಲ್ಲಿ ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ.