ಮಂಗಳೂರು:ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಗೆ ಪ್ರತಿಷ್ಠಿತ “GEEF ಗ್ಲೋಬಲ್ ವಾಟರ್ಟೆಕ್ ಅವಾರ್ಡ್ 2026” ಲಭಿಸಿದೆ.
“ವಾಟರ್ ಎಫಿಷಿಯನ್ಸಿ ಮ್ಯಾನೇಜ್ಮೆಂಟ್ ಕಂಪನಿ ಆಫ್ ದಿ ಇಯರ್” ವಿಭಾಗದಲ್ಲಿ ವಿವಿಧ ಕೈಗಾರಿಕೆಗಳ ನಡುವೆ MRPL ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ನೀರಿನ ನಿರ್ವಹಣೆಯಲ್ಲಿ ಮಾಡಿದ ಉತ್ತಮ ಕೆಲಸಕ್ಕಾಗಿ ಈ ಗೌರವ ಸಿಕ್ಕಿದೆ. ಆಗಸ್ಟ್ 21, 2026 ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ MRPL ನ ಜನರಲ್ ಮ್ಯಾನೇಜರ್ ಶ್ರೀ ಪ್ರಸನ್ನ ಕುಮಾರ್ ಟಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಮಾಜಿ ಜಲಶಕ್ತಿ ಕಾರ್ಯದರ್ಶಿ ಡಾ. ಶ್ಯಾಮಲ್ ಕುಮಾರ್ ಸರ್ಕಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಇದು ಪರಿಸರ ಕಾಳಜಿ ಮತ್ತು ಸುಸ್ಥಿರ ಬೆಳವಣಿಗೆಯಲ್ಲಿ MRPL ನ ಬದ್ಧತೆಯನ್ನು ತೋರಿಸುತ್ತದೆ.

