ಚಿಕ್ಕೋಡಿ: ಕುಡಿದು ಗಲಾಟೆ ಮಾಡಿದ ಆರೋಪಕ್ಕೆ 50 ಸಸಿ ನೆಡುವ ಶಿಕ್ಷೆಯನ್ನು ಚಿಕ್ಕೋಡಿ ಜೆಎಂಎಫ್‌ಸಿ ನ್ಯಾಯಾಲಯ ವಿಶೇಷವಾಗಿ ತೀರ್ಪು ಪ್ರಕಟಿಸಿದೆ.
ಯಕ್ಸಂಬಾ ಪಟ್ಟಣದ ಆರೋಪಿ ಅನಿಲ ನಿಂಗಪ್ಪ ಪೂಜಾರಿಗೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ಆವರಣದಲ್ಲಿ 25 ಮರಗಳು ಹಾಗೂ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ 25 ಮರಗಳನ್ನು ನೆಡುವಂತೆ ಆದೇಶ ಮಾಡಲಾಗಿದೆ.
ತನ್ನ ಪತ್ನಿಯೊಂದಿಗೆ ಸೇರಿ ಕೋರ್ಟ್ ಆವರಣದಲ್ಲಿ 25 ಸಸಿ ಹಾಗೂ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ 25 ಸಸಿಯನ್ನು ಆರೋಪಿ ನೆಟ್ಟಿದ್ದಾರೆ. ತನ್ನ ತಪ್ಪನ್ನು ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡಿದ್ದರಿಂದ ಕೋರ್ಟ್ ನಿಂದ ಶಿಕ್ಷೆ ಪ್ರಕಟವಾಗಿದೆ. ಪರಿಸರ ಬೆಳಸುವ ಕೋರ್ಟ್ ಶಿಕ್ಷೆ ಎಲ್ಲರ ಗಮನ ಸೆಳೆದಿದೆ.

