ಮಂಗಳೂರು: ಬಂಟ್ವಾಳ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಪೊಲೀಸ್ ಇಲಾಖೆಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಪೊಲೀಸ್ ಇಲಾಖೆಯ ಕ್ರಮದ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಕ್ರೋಶ ವ್ಯಕ್ತಪಡಿಸಿದೆ. ಇದರ ಹಿಂದೆ ವ್ಯವಸ್ಥಿತ ಸಂಚು ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿ ಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿ ಹಿಂದೂ ಸಂಘಟನೆಯನ್ನ ಟಾರ್ಗೆಟ್ ಮಾಡುತ್ತಿದೆ. ಯಾರನ್ನೋ ಮೆಚ್ಚಿಸಲು ಹಿಂದೂ ಸಂಘಟನೆಯನ್ನ ಟಾರ್ಗೆಟ್ ಮಾಡಿದ್ರೆ, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಅನುಭವಿಸುತ್ತಾರೆ ಎಂದರು.

ನಮ್ಮ ಸಂಘಟನೆ ರಾಷ್ಟ್ರಕ್ಕೋಸ್ಕರ ಕೆಲಸ ಮಾಡುವ ಸಂಘಟನೆ. ನಮ್ಮನ್ನ ಮುಗಿಸುವ ಹುನ್ನಾರ ಮಾಡಿದ್ರೆ ಹಿಂದೂ ಬಾಂಧವರು ಉತ್ತರಿಸುತ್ತಾರೆ. ಎಸ್ಪಿಯವರೇ ಈ ಕೇಸ್ ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ರನ್ನ ಸಿಲುಕಿಸಿದ್ರೆ, ಹಿಂದೂ ಸಂಘಟನೆಗಳು ರಸ್ತೆಗೆ ಇಳಿಯುತ್ತದೆ. ನಿಮ್ಮ ಎಸ್ಪಿ ಕಚೇರಿ ಚಲೋ ಎಂಬ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪೊಲೀಸರಿಗೆ ಸ್ಪಷ್ಟವಾಗಿ ಗೊತ್ತಿದೆ ಯಾರನ್ನ ಬಂಧನ ಮಾಡಲಾಗಿದ್ಯೋ, ಅವರಿಗೂ ಈ ಪ್ರಕರಣಕ್ಕೂ ಏನು ಸಂಬಂಧವಿಲ್ಲ ಎಂದು. ನ್ಯಾಯಾಲಯ ಕೋಕಾ ಕೇಸ್ ನಲ್ಲಿ ಜಾಮೀನು ಕೊಟ್ಟಿದೆ. ಆದರೂ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆ ಹಾಕುತ್ತಾರೆ. ಇವರಿಗೆ ಒತ್ತಡ ಹಾಕುತ್ತಿರುವವರು ಯಾರು? ಎಂದರು.

View this post on Instagram

A post shared by News Karnataka (@newskarnataka)