ಮಂಗಳೂರು: ವಿತ್ತೀಯ ಕೊರತೆ ಇದ್ರು ಸಚಿವ ಸಂಪುಟದಲ್ಲಿ ಬರಪೂರ ಘೋಷಣೆ ಆರೋಪ ಕೇಳಿಬಂದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯಿಂದ ಮಂಗಳೂರಿನ ಮಿನಿ ವಿಧಾನಸೌಧ ಬಳಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಭಾಗಿಯಾದರು. ಖಾಲಿ ಪಾತ್ರೆ ಹಿಡಿದು ಪ್ರತಿಭಟನೆ ನಡೆಸಲಾಯಿತು. ಕಿವಿಗೆ ಹೂ, ಕೈಯಲ್ಲಿ ಚಂಬು ಹಿಡಿದಿರೋ ಸಿಎಂ ಪೋಟೊ ಹಿಡಿದು ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಚೆಮ್ಬು ನೀಡಿಲ್ಲ ಕರ್ನಾಟಕ್ಕೆ ಚೆಮ್ಬು ನೀಡಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಉಂಡು ಹೋದ ಕೊಂಡು ಹೋದ ಎಂಬುದಕ್ಕೆ ಸಮ ಎಂದು ಸಭೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ವಾಗ್ದಾಳಿ ನಡೆಸಿದರು.

