ಮುಲ್ಕಿ ಹಳೆಯಂಗಡಿ ರಾಷ್ಟೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಕ್ಷ್ಮಿ ಗಣೇಶ್ ಹೆಸರಿನ ಎಕ್ಸ್‌ಪ್ರೆಸ್ ಬಸ್ಸಿನ ಮುಂಭಾಗದ ಗಾಜಿಗೆ ಗಿಡುಗ ಬಡಿದಿದೆ.

ಗಾಜು ಪುಡಿ ಪುಡಿಯಾಗಿದ್ದು, ಸ್ವಲ್ಪ ಗಾಯಗೊಂಡರೂ ವಿಚಲಿತರಾಗದೆ ಲಕ್ಷ್ಮಿ ಗಣೇಶ್ ಬಸ್ಸಿನ ಚಾಲಕರಾದ ಹರೀಶ್ ಪೂಜಾರಿ ಬಸ್ಸು ನಿಲ್ಲಿಸಿದ್ದಾರೆ. ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.