ಮಂಗಳೂರು : ಬಸವರಾಜ್ ರಾಯ ರೆಡ್ಡಿ ಇಸ್ಲಾಂ ಧರ್ಮ ಶ್ರೇಷ್ಠ, ನಾನು ಮಠ ಮಂದಿರಕ್ಕೆ ಹೋಗೋದಿಲ್ಲ ಎಂಬ ಹೇಳಿಕೆ ವಿಚಾರವಾಗಿ ಶಾಸಕ ಭರತ್ ರಾಜ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು. ಹೊಟ್ಟೆ ಪಾಡಿಗಾಗಿ, ವೋಟಿಗಾಗಿ ಕಾಂಗ್ರೆಸ್ ಯಾವೆಲ್ಲ ವೇಷ ನೋಡಲಿಕ್ಕೆ ಸಿಗತ್ತೆ ಗೊತ್ತಿಲ್ಲ ಎಂದರು.
ಅವರಿಗೆ ಈ ರೀತಿ ಮಾತನಾಡಲು ಸ್ವಾತಂತ್ರ್ಯ ಕೊಟ್ಟಿದ್ದು ಅವರ ಧರ್ಮ. ಮಠ ಮಂದಿರಕ್ಕೆ ಹೋಗೋದಿಲ್ಲ ಅಂತ ಹೇಳಿಕೆ ಕೊಟ್ಟಿದ್ದಾರೆ. ಎಲೆಕ್ಷನ್ ಬಂದಾಗ ನೋಡಿ ಮಠ ಮಂದಿರದಲ್ಲಿ ಲೈನ್ ನಲ್ಲಿ ನಿಲ್ತಾರೆ. ಇವರ ನ್ಯಾಷನಲ್ ಲೀಡರ್ ರಾಹುಲ್ ಗಾಂಧಿ ಶರ್ಟ್ ಮೇಲೆ ಜನಿವಾರ ಹಾಕ್ತಾರೆ. ಇವರ ಯಾವ ಯಾವ ನಾಟಕ ಜನ ನೋಡ್ಬೇಕು ಎಂದು ನಮಗೆ ಗೊತ್ತಿಲ್ಲ ಎಂದು ಭರತ್ ಶೆಟ್ಟಿ ಮಂಗಳೂರು ಉತ್ತರ ಬಿಜೆಪಿ ಶಾಸಕ ಹೇಳಿದರು.

