ಮಂಗಳೂರು : ಇಸ್ಲಾಂ ಬಗ್ಗೆ ಬಸವರಾಜ ರಾಯರೆಡ್ಡಿ ಹೇಳಿಕೆ ವಿವಾದ ವಿಚಾರವಾಗಿ ಮಂಗಳೂರಿನಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ. ಬಸವರಾಜ ರಾಯರೆಡ್ಡಿ ಜ್ಞಾನವುಳ್ಳ, ಪ್ರಾಮಾಣಿಕ ಶಾಸಕ. ಅವರು ನನ್ನ ತಂದೆಯ ಕಾಲದಲ್ಲೇ ಶಾಸಕರಾಗಿದ್ದವರು. ಅಂಥಹ ವ್ಯಕ್ತಿತ್ವಕ್ಕೆ ನಾವು ಗೌರವ ಕೊಡಬೇಕು, ಅವರು ಯಾವುದೇ ಪಕ್ಷದಲ್ಲಿ ಇದ್ದರೂ ಗೌರವಿಸಿ ಎಂದರು.
ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ, ಯಾರನ್ನೂ ನೋಯಿಸಲು ಅಲ್ಲ. ಅವರು ಹಿಂದೂ ಧರ್ಮವನ್ನ ಉತ್ತಮವಾಗಿ ಪಾಲಿಸ್ತಾರೆ. ಅವರು ಈದ್ ಕಾರ್ಯಕ್ರಮ ಹೋದಾಗ ಇಸ್ಲಾಂ ಬಗ್ಗೆ ಮಾತನಾಡಿದ್ದಾರೆ. ಸಾಮಾನ್ಯವಾಗಿ ಮುಕ್ತ ಮನಸ್ಸಿನಿಂದ ಸೌಹಾರ್ದತೆಯಿಂದ ಹೇಳಿದ್ದಾರೆ. ಅದನ್ನ ವಿರೋಧಿಸುವ ನೀಚ ಮನಸ್ಥಿತಿ ಯಾಕೆ, ಅದೆಲ್ಲಾ ಬೇಕಾ?, ಜನರ ಮಧ್ಯೆ ಗೊಂದಲ ಸೃಷ್ಟಿಸೋದು ರಾಜಕೀಯ ಮಾಡೋದು ಸರಿಯಲ್ಲ, ಇಂಥ ರಾಜಕೀಯ ಮಾಡೋರು ದೇಶ ಪ್ರೇಮಿಗಳಲ್ಲ, ಅವರು ದುರುದ್ದೇಶ, ರಾಜಕೀಯ ಇಟ್ಟುಕೊಂಡು ಹೇಳಿಕೆ ನೀಡಿಲ್ಲ ಎಂದರು.

