ಮಂಗಳೂರು: ಉರ್ವ ಪೊಲೀಸರ ಕಾರ್ಯಾಚರಣೆಯಿಂದ ದಂಡುಪಾಳ್ಯ ಗ್ಯಾಂಗ್ ನ ಆರೋಪಿಯ ಬಂಧನವಾಗಿದೆ. 1997 ರಲ್ಲಿ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಚಿಕ್ಕ ಹನುಮ@ಚಿಕ್ಕ ಹನುಮಂತಪ್ಪ ಬಂಧಿತ ಆರೋಪಿ. ಸುಮಾರು 29 ವರ್ಷಗಳಿಂದ ಆರೋಪಿ ತಲೆಮರೆಸಿಕೊಂಡಿದ್ದರು. ಆಂಧ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆ ಎಂಬಲ್ಲಿ ಬಂಧನವಾಗಿದೆ. 11-10-1997ರಂದು ಉರ್ವ ಮಾರಿಗುಡಿ ಕ್ರಾಸ್ ಬಳಿಯ ಅನ್ವರ್ ಮಹಲ್ ಎಂಬ ಮನೆಗೆ ದಂಡುಪಾಳ್ಯ ಗ್ಯಾಂಗ್ ನುಗ್ಗಿದೆ.

ಮನೆಯಲ್ಲಿದ್ದ ಲೂವಿಸ್ ಡಿಮೆಲ್ಲೋ(80), ರಂಜಿತ್ ವೇಗಸ್(19) ನ್ನು ದಂಡುಪಾಳ್ಯ ಗ್ಯಾಂಗ್ ಕೊಲೆ ಮಾಡಿದೆ. ಕೊಲೆ ಮಾಡಿ ಚಿನ್ನಾಭರಣಗಳ್ನು ದೊಚಿಕೊಂಡು ಗ್ಯಾಂಗ್ ಪರಾರಿಯಾಗಿದೆ. ಚಿಕ್ಕ ಹನುಮಂತಪ್ಪ ಸೇರಿದಂತೆ ಗ್ಯಾಂಗ್ ನ ಎಂಟು ಸದಸ್ಯರು ಕೃತ್ಯ ನಡೆಸಿದ್ದರು.

ಪ್ರಕರಣದ ವಿಚಾರಣೆ ಮುಕ್ತಾಯಗೊಂಡು ಆಪಾದಿತರು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಆದ್ರೆ ಹೆಸರು ಬದಲಿಸಿಕೊಂಡು ಆರೋಪಿ ಚಿಕ್ಕ ಹನುಮ ನಾಪತ್ತೆಯಾಗಿದ್ದರು. ಚಿಕ್ಕ ಹನುಮ@ಚಿಕ್ಕ ಹನುಮಂತಪ್ಪ @ಕೆ.ಕೃಷ್ಣಪ್ಪ@ಕೃಷ್ಣ ಎಂದು ಹೆಸರು ಬದಲಿಸಿಕೊಂಡಿದ್ದ ಆರೋಪಿಗಳಾಗಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.