ಮಂಗಳೂರು : ಮುಖ್ಯಮಂತ್ರಿಯವರು ಮತ್ತು ಸಂಪುಟ ದರ್ಜೆಯ ಸಚಿವರ ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆಯ ಹಿತ ದೃಷ್ಟಿಯಿಂದ ಸೆಪ್ಟೆಂಬರ್ 17 ರಂದು 4 ಗಂಟೆಯಿಂದ ಸೆಪ್ಟೆಂಬರ್ 19 ರಂದು 10 ಗಂಟೆಯ ತನಕ ಮೇರಿಹಿಲ್ ಹೆಲಿಪ್ಯಾಡಿನ ಸುತ್ತ, ಮುಖ್ಯಮಂತ್ರಿಯವರ ವಾಸ್ತವ್ಯದ ಹೋಟೇಲ್ ತಾಜ್ ವಿವಾಂತದ ಸುತ್ತ ಮತ್ತು ಸಚಿವ ಸಂಪುಟ ಸಭೆ ನಡೆಯುವ ಪಡೀಲ್‍ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕಛೇರಿ ‘ಪ್ರಜಾಸೌಧ’ ದ ಸುತ್ತಲಿನ 1 ಕಿಲೋ ಮೀಟರ್ ವ್ಯಾಪ್ತಿಯನ್ನು ’ತಾತ್ಕಾಲಿಕ ಕೆಂಪು ವಲಯ ಎಂದು ಘೋಷಿಸಿ, ಯಾವುದೇ ಮಾದರಿಯ ಡ್ರೋಣ್ ಹಾರಾಟ, ಬಳಕೆ ಮತ್ತು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ.