ಸಕಲೇಶಪುರ : ಸಕಲೇಶಪುರ ಭಾಗದಲ್ಲಿ ಮುಂಗಾರು ಮಳೆ ಆರ್ಭಟ ಹೆಚ್ಚಾಗಿದ್ದು ಇಂದು ಬೆಳಗ್ಗೆ ಚಲಿಸುತ್ತಿದ್ದ ಆಟೋ ಮೇಲೆ, ಮರ ಒಂದು ಬಿದ್ದಿರುವ ಘಟನೆ ಜರುಗಿದೆ.
ತಾಲೂಕಿನ ಸುಂಡೇಕೆರೆ ಸಮೀಪ ಕೆಲಗಳಲೆ ಮಾರ್ಗವಾಗಿ ತೆರಳುತ್ತಿದ್ದ ಆಟೋಗೆ ರಸ್ತೆ ಬದಿಯ ಬೃಹತ್ ಮರ ಬಿದ್ದಿದೆ. ಘಟನೆಯಿಂದ ಆಟೋ ಚಾಲಕನಿಗೆ ತಲೆಗೆ ತೀವ್ರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.