News Karnataka Kannada
Friday, May 03 2024
ಶಿವಮೊಗ್ಗ

ಶಿವಮೊಗ್ಗ: ಫೆ.27 ರಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಮೋದಿ

Prime Minister Narendra Modi will lay foundation stone for various projects on February 27.
Photo Credit : By Author

ಶಿವಮೊಗ್ಗ: ಫೆ.27 ರಂದು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ಜೊತೆಗೆ ಹಲವು ವಿವಿಧ ಕಾಮಗಾರಿ ಮತ್ತು ಶಂಕುಸ್ಥಾಪನೆ ಆಗಲಿದೆ. ಪ್ರಧಾನಿ ಮೋದಿ ಆಗಮಿಸುತ್ತಿದ್ದು ಪ್ರಧಾನಿಯಾಗಿ ಇದು ಎರಡನೇ ಬಾರಿ ಆಗಮಿಸುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಬ್ಬಲ್ ಇಂಜಿನ್ ಸರ್ಕಾರ ಪ್ರಯತ್ನ ಮಾಡುದ್ರೆ, ಬಿ.ಎಸ್ ವೈ ಆಶೀರ್ವಾದದಿಂದ ಪಕ್ಷದ ಅಡಿಯಲ್ಲಿ ಅಭಿವೃದ್ಧಿಯನ್ನ ಹೇಗೆ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ಇನ್ನೂಪ್ರಧಾನಿ ಕಚೇರಿಯಿಂದ ಅಧಿಕೃತವಾದ ಟಿಪಿ ಬರಬೇಕಿದೆ ಎಂದರು. ಅದು ನಿಗದಿ ಪಡಿಸಿದ ನಾಲ್ಕೈದು ದಿನಗಳಲ್ಲಿ ಹೊರಬೀಳಲಿದೆ ಎಂದರು.

ಜಿಲ್ಲಾ ಆಡಳಿತ ಕಡೆಯಿಂದ ಮುಖ್ಯಕಾರ್ಯದರ್ಶಿಯ ಮೂಲಕ ಪ್ರಧಾನಿ ಕಚೇರಿಗೆ ಯಾವ ಯಾವ ಕಾರ್ಯಕ್ರಮ ಉದ್ಘಾಟನೆ ಆಗಲಿದೆ ಮತ್ತು ಶಂಕುಸ್ಥಾಪನೆಯಾಗಲಿದೆ ಎಂಬ ವಿವರ ಕೇಳಿದ್ದಾರೆ. ಅದರ ವಿವರನ್ನ ನೀಡಲಾಗಿದೆ ಎಂದರು. ವಿಮಾನ ನಿಲ್ದಾಣ, 600 ಕೋಟಿ ವೆಚ್ಚವಾಗಲಿದೆ 450 ಕೋಟಿ ಇನ್ಫ್ರಾ ಸ್ಟ್ರಕ್ಚರಗೆ ವೆಚ್ಚವಾಗಲಿದೆ. ಭೂಮಿ ಸ್ವಾಧೀನ ಬಿಟ್ಟು ಇನ್ಫ್ರಾಗೆ ಇಷ್ಟು ವೆಚ್ಚವಾಗಿದೆ ಎಂದರು.

ಒಂದು ವಾರದಕೆಳಗೆ ಡಿಜಿಸಿಎಲ್ ತಂಡ ಬಂದಿತ್ತು. ಮತ್ತೆ ಇಂದು ಬಂದಿದ್ದಾರೆ. 75 ವಿವಿಧ ಆಕ್ಷೇಪಣೆ ಹೇಳಿದ್ದರು.‌ಅದನ್ನ ಒಂದು ವಾರದಲ್ಲಿ ಮುಗಿಸಲಿದೆ. ನಾಳೆ ಎಸ್ ಆರ್ ನೋ ಎಂಬ ಉತ್ತರ ಸಿಗಲಿದೆ. ಇನ್ನು ಒಂದು ವಾರದಲ್ಲಿ ಯಾವ ಯಾವ ವಿಮಾನಗಳು ಹಾರಾಡಲಿದೆ ಎಂಬುದು ತಿಳಿಯಲಿದೆ ಎಂದರು.

ಬಿಸಿಎಸ್, ಏರ್ ಪೋರ್ಟ್ ಪ್ರಾಧಿಕಾರ, ಮೆಟ್ರೋಲಾಜಿಕಲ್ ತಂಡ, ಮ್ಯಾನೇಜ್ ಮೆಂಟ್ ತಂಡ, ಸರ್ವಲೆನ್ಸ್ ತಂಡ ಸೇರಿ 10 ತಂಡಗಳು ಬಂದು ಭೇಟಿ ನೀಡಿದೆ. ಪರವಾನಗಿ, ಆಪರೇಷನ್ ಗೆ ಇಂಡಿಗೋ ಮತ್ತು ಸ್ಟಾರ್ ರ್ಏರ್ ಲೈನ್ಸ್, ಮುಂಬೈಗೆ, ಗೋವಾ ಗೆ ಬಸ್, ಹೊರಗಡೆಯಿಂದ ಎಷ್ಟುಜನ ಬರ್ತಾರೆ ಎಂದಬುದನ್ನ ಅರಿತು. ನಂತರ ವಿಮಾನ ಹಾರಾಟ ನಡೆಯಲಿದೆ ಎಂದು ತಿಳಿಸಿದರು.

ರೈಲ್ವೆ ಕ್ಷೇತ್ರದಲ್ಲಿ ಶಿವಮೊಗ್ಗ ಬಿಕೆಟಗರಿ ಲೈನ್ ಆಗಿದೆ. ತಾಳಗುಪ್ಪ ಡೆಡ್ ಎಂಡ್ ಆಗಿದೆ. ವಿಶೇಷ ಪ್ರಯತ್ನದಿಂದ ಶಿವಮೊಗ್ಗ ಶಿಕಾರಿಪುರ ರಾಣೇಬೆನ್ನೂರುಗೆ ಹೊಸ ರೈಲ್ವೆ ಮಾರ್ಗಕ್ಕೆ ಶಂಕುಸ್ಥಾಪನೆಯನ್ನ ಅಂದು ಪ್ರಧಾನಿ ಮೋದಿಯಿಂದ ಫೆಸ್ 1 ಕಾಮಗಾರಿಗೆ ಚಾಲನೆ ದೊರೆಯಲಿದೆ. 555 ಎಕರೆ ಭೂಮಿಯಲ್ಲಿ ಶಿವಮೊಗ್ಗ ಶಿಕಾರಿಪುರಕ್ಕೆ ರೈಲ್ವೆ ಸಂಪರ್ಕ ಮುಗಿದಿದೆ. 612 ಕೋಟಿ ವೆಚ್ಚದಲ್ಲಿ ರಾಣೇಬೆನ್ನೂರು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ದೊರೆಯಲಿದೆ ಎಂದರು.

ಕೋಟೆಗಂಗೂರು, ರಾಮ ನಗರ, ಕೊರ್ಲಹಳ್ಳಿ ಶಿಕಾರಿಪುರ ರಾಣೇಬೆನ್ನೂರಿಗೆ ಈ ರೈಲ್ವೆವಮಾರ್ಗ ತಲುಪಲಿದೆ. ಕೋಟೆ ಗಂಗೂರಿನಲ್ಲಿ 100 ಕೋಟಿಯಲ್ಲಿ ಕೋಚಿಂಗ್ ಡಿಪೋ ನಡೆಯುತ್ತಿದೆ. ಇದಕ್ಕೆ ಶಂಕುಸ್ಥಾಪನೆ ಆಗಲಿದೆ. 1000 ಕೋಟಿ ರೂನಲ್ಲಿ ಈ ಡಿಪೋ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ರಾಷ್ಟ್ರೀಯ ಹೆದ್ದಾರಿಗೂ ಚಾಲನೆ ದೊರೆಯಲಿದೆ ಎಂದರು.

ಹೊಸನಗರ, ಮಾವಿನಗುಂಡಿಯವರೆಗೆ ಬೈಂದೈರಿನಿಂದ ನಾಗೋಡಿ ಅಗಲೀಕರಣವಾಗಲಿದೆ. ತೀರ್ಥಹಳ್ಳಿ ಮೇಗರವಳ್ಳಿ ಆಗುಂಬೆ, ಭಾರತೀಪುರ ರಸ್ತೆಅಭಿವೃದ್ಧಿ, 169 ಅಗಲೀಕರಣ, ಭದ್ರಾಸೇತುವೆಗೆ 970 ಕೋಟಿ ವೆಚ್ಚದಲ್ಲಿ ಶಂಕುಸ್ಥಾಪನೆ, ವಿದ್ಯಾನಗರದ ರೈಲ್ವೆ ಓವರ್ ಬ್ರಿಡ್ಜ್ ಉದ್ಘಾಟನೆ ಆಗಲಿದೆ.

44 ಸ್ಮಾರ್ಟ್ ಸಿಟಿ ಕಾಮಗಾರಿ ಲೋಕಾರ್ಪಣೆ, ಜಲಜೀವನ ಮಿಷನ್ 526 ಕೋಟಿಯಲ್ಲಿ 225700 ಮನೆಗಳಿಗೆ ನಲ್ಲಿ ನೀರಿನ ಯೋಜನೆ 94 ಸಾವಿರ ಮನೆಗೆ ಮಾತ್ರ ಟ್ಯಾಪಿಂಗ್ ವಾಟರ್ ಇತ್ತು. ಜಲಜೀವನ ಮಿಷನ್ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನ ಲೋಕಾರ್ಪಣೆ ಆಗಲಿದೆ ಎಂದರು.

ಪ್ರಧಾನಿ ಕಿಸಾನ್ ಸನ್ಮಾನ್ ಯೋಜನೆಯ ಅಡಿ13 ನೇ ಕಂತನ್ನ ರೈತರಿಗೆ ಹಂಚಲಿದ್ದಾರೆ. 338 ಕೋಟಿ ಜಿಲ್ಲೆಯ ರೈತರ ಅಕೌಂಟ್ ಗೆ ಜಮಾವಾಗಲಿದೆ. ಕೆಎಂಎಫ್ ಮತ್ತು ಮ್ಯಾಮ್ ಕೋಸ್ ನ ಕಚೇರಿ ಉದ್ಘಾಟನೆ ಆಗಲಿದೆ. 3337 ಕೋಟಿ ಒಟ್ಟು ಕಾಮಗಾರಿಗಳ ಯೋಜನೆ ಆರಂಭವಾಗಲಿದೆ.

ಹೆಸರು ಫೈನಲ್ ಆಗಿಲ್ಲ
ನಾಳೆ ಸಂಜೆ ಅಧಿಕಾರಿಗಳು ಮತ್ತು ಶಾಸಕ ಈಶ್ವರಪ್ಪನವರ ಜೊತೆ ಮಾತುಕತೆ ನಡೆಯಲಿದೆ. 2 ಲಕ್ಷ ಜನ ಸೇರುವ ಸಂಭವವಿದೆ. ಮಧ್ಯಾಹ್ನ 12-30 ಕ್ಕೆ ಆಗಮಿಸಲಿದ್ದಾರೆ. 4-30 ಕ್ಕೆ ಆಗಮಿಸಲಿದ್ದಾರೆ. ಯಡಿಯೂರಪ್ಪನವರ ಹೆಸರು ಪ್ರಸ್ಥಾಪನೆ ಮಾಡಲಾಗಿತ್ತು.‌ನನನ್ನ ಹೆಸರು ಬೇಡ ಎಂದು ಬಿಎಸ್ ವೈ ತಿಳಿಸಿದ್ದಾರೆ. ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಆಗಿಲ್ಲ. ಸಚಿವ ಸಂಪುಟದಲ್ಲಿ ಸಿಎಂ‌ ಪ್ರಸ್ತಾಪಿಸುವುದಾಗಿ ತಿಳಿಸಿದ್ಧರು. ಆದರೆ ಇನ್ನೂ ಆಗಿಲ್ಲ. ಎರಡು ವಾರದಲ್ಲಿ ಏನು ಆಗಲಿದೆ ಕಾದು ನೋಡಬೇಕಿದೆ ಎಂದರು

ಉದ್ಘಾಟನೆ ಆದರೂ ವಿಮಾನ ಹಾರಾಟಕ್ಕೆ ಸಮಯ ಬೇಕು
ಉದ್ಘಾಟನೆ ಆದ ಮೇಲೆ 15 ದಿನ ದಿಂದ 1 ತಿಂಗಳ ಒಳಗೆ ಆಪರೇಷನ್ ಆರಂಭವಾಗಲಿದೆ. ಪ್ರಧಾನಿ ಮೋದಿ ಅಂದು ಶಿವಮೊಗ್ಗದಲ್ಲಿ ಹಾರಾಡುವ ಮೊದಲ ವಿಮಾನದಲ್ಲಿ ಬಂದು ಇಳಿಯಲಿದ್ದಾರೆ ಎಂದರು. ರೈಲ್ವೆ ಮತ್ತು ವಿಮಾನ ನಿಲ್ದಾಣದ ಮೂಲಕ ಲಕ್ಷಾಂತರ ಕುಟುಂಬ ಉದ್ಯೋಗ ಪಡೆಯಲಿದೆ

ಎರಡು ಮೂರು ವರ್ಷ ನಷ್ಟವೇ
ಏರ್ ಪೋರ್ಟ್ ನಿಂದ ನಷ್ಟ ಜಾಸ್ತಿ. ಎರಡು ಮೂರು ವರ್ಷ ಇದು ನಷ್ಟದಲ್ಲಿ ನಡೆಯಲಿದೆ ಅದಕ್ಕೆ ಬೇಕಾದ ಪ್ರವಾಸೋದ್ಯಮವನ್ನ ಬೆಳೆಸುವ ಕೆಲಸವಾಗಬೇಕಿದೆ. ವಿಐಎಸ್ಎಲ್ ನ್ನ ಪರಭಾರೆ ಮಾಡಿರುವುದರಿಂದ ಗೃಹಸಚಿವರಿಂದ ಅಮಿತ್ ಶಾರೊಂದಿಗೆ ಮಾತುಕತೆ ನಡೆಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು