News Karnataka Kannada
Thursday, May 02 2024
ಶಿವಮೊಗ್ಗ

ಶಿವಮೊಗ್ಗ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ, ಹಲವು ವಿಷಯಗಳ ಕುರಿತು ಚರ್ಚೆ

Deputy Commissioner chairs meeting, discusses several issues
Photo Credit : By Author

ಶಿವಮೊಗ್ಗ:  ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ನೇತೃತ್ವದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಕೆನರಾ ಬ್ಯಾಂಕ್, ಡಿಸಿಸಿ ಮತ್ತು‌ ಡಿಎಲ್ ಆರ್ ಸಿ ಸಭೆ ನಡೆಸಿ ಹಲವು ವಿಷಯಗಳನ್ನ ಚರ್ಚಿಸಿ ಸೂಚನೆ ನೀಡಲಾಗಿದೆ.

ಜಿಲ್ಲೆಯ ಪಟ್ಟಣ ಪಂಚಾಯತ್, ನಗರ ಸಭೆ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಬಡವರಿಗಾಗಿ ನಿರ್ಮಾಣ ಮಾಡುತ್ತಿರುವ‌ ಮನೆಗಳಿಗೆ ತೀವ್ರಗತಿಯಲ್ಲಿ ಬ್ಯಾಂಕ್ ಸಾಲದೊರೆಯುವಂತಾಗಬೇಕಿದ್ದು, ತ್ವರಿತಗತಿಯಲ್ಲಿ ಮನೆ ಕಟ್ಟುವಂತಾಗಲು ಡಿಸಿ ಸೂಚನೆ ನೀಡಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವಲ್ಲಿ ವಿಳಂಭವಾಗುತ್ತಿದ್ದು ಈ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳಲಾಯಿತು.‌ ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಬೀದಿ ಬದಿ ವ್ಯಾಪಾರಸ್ಥರ ಅರ್ಜಿ 450 ಬಂದಿದ್ದು 320 ಜನರಿಗೆ ಸಾಲಕೊಟ್ಟಿಲ್ಲ. ಡಿಸೆಂಬರ್ ಒಳಗೆ ಕೊಡದಿದ್ದರೆ ಕೇಂದ್ರ ಸರ್ಕಾರಕ್ಕೆ ಹೆಚ್ ಡಿ ಎಫ್ ಸಿ ಬ್ಯಾಂಕ್ ಸಹಕರಿಸುತ್ತಿಲ್ಲ ಎಂದು ಪತ್ರ ಬರೆಯಲು ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಸೂಚಿಸಲಾಗಿದೆ.

ಮನೆ ಮತ್ತು ಶಿಕ್ಷಣ ಸಾಲದಲ್ಲಿಯೂ ಕರ್ನಾಟಕ ಬ್ಯಾಂಕ್ ಸಹಕರಿಸುತ್ತಿಲ್ಲವೆಂಬುದು ಬೆಳಕಿಗೆ ಬಂದಿದ್ದು ಜಿಲ್ಲೆಯಲ್ಲಿ 26‌ಬ್ಯಾಂಚ್ ನ್ನ ಇಟ್ಟುಕೊಂಡು ಮನೆ ಸಾಲ ಮತ್ತು ಶೈಕ್ಷಣಿಕ ಸಾಲವನ್ನ‌ ವಿಳಂಭಗೊಳಿಸುತ್ತಿರುವ ಬಗ್ಗೆ ಡಿಸಿ ಎಚ್ಚರಿಕೆ ನೂಡಿದರು. ಹಣ ಬೇರೆಡೆ ತೆಗೆದುಕೊಂಡು ಹೋಗ್ತಾ ಇದ್ದೀರ ಎಂದು ಡಿಸಿ ಕೆಲ ಸಂದರ್ಭದಲ್ಲಿ ಗರಂ ಆಗಿದ್ದೂ ಇದೆ.‌ ಸಾಲ ನೀಡುವಲ್ಲಿ 60% ಪ್ರಗತಿ ಸಾಧಿಸದಿದ್ದರೆ ಏನು ಪ್ರಯೋಜನ ಎಂದು ಸಂಬಂಧಿತ ಬ್ಯಾಂಕ್ ಮ್ಯಾನೇಜರ್ ನ್ನ ತರಾಟೆಗೆ ತೆಗೆದುಕೊಳ್ಳಲಾಯಿತು.‌

ಎಸ್ ಬಿಎಂ, ಯುನಿನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಗಳು 40 ರಿಂದ 48% ಈ ಎರಡೂಕ್ಷೇತ್ರದಲ್ಲಿ ಪ್ರಗತಿ ಸಾಧಿಸಿವೆ. ಇವುಗಳು ಸಹ ಜಿಲ್ಲೆಯಲ್ಲಿ ಅಧಿಕ‌ ಬ್ಯಾಂಚ್ ಗಳನ್ನ ಹೊಂದಿದ್ದರೂ ಸಾಲ ನೀಡುವಲ್ಲಿ ವಿಳಂಭ ನೀತಿ ಅನುಸರಿಸುತ್ತಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಯಿತು.‌ಕರ್ನಾಟಕ 41% ಸಾಲ ನೀಡಿರುವುದಾಗಿ ಸಭೆಯಲ್ಲಿಯಲ್ಲಿ ಚರ್ಚಿಸಲಾಯಿತು.

ಸ್ಲಂ ಬೋರ್ಡ್ ಗಳಿಂದ ನಿರ್ಮಿಸಲು 2000 ಕ್ಕೂ ಅಧಿಕ ಅರ್ಜಿ ಬಂದಿದೆ. ಸ್ಲಂ ಬೋರ್ಡ್ ಮತ್ತು ಬ್ಯಾಂಕ್ ನಡುವೆ ಹೊಂದಾಣಿಕೆ ಬೇಕು. ಸ್ಲಂ‌ಬೋರ್ಡ್ ನ ಮನೆಗಳಿಗೆ ಬ್ಯಾಂಕ್ ಗಳು 12% ಮಾತ್ರ ಮನೆಗಳ ಸಾಲ ನೀಡಿವೆ. ಹಾಗಾಗಿ ಇದರ ಗತಿ ಹೆಚ್ಚಿಸಲು ಸಂಬಂಧ ಪಟ್ಟ ಅಧಿಕಾರಿಗಳು ಪ್ರತಿ ವಾರ ನನಗೆ ಮಾಹಿತಿ ಕೊಡಬೇಕು. ಅವಶ್ಯಕತೆ ಇರುವ ಕ್ಷೇತ್ರಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್ ಗಳು ವಿಫಲವಾಗಿವೆ. ಆದರೆ ಅವಶ್ಯಕತೆ ಇಲ್ಲದ ಕ್ಷೇತ್ರಗಳಿಗೆ ಹೆಚ್ಚು ಸಾಲ ನೀಡಿರುವುದು ಕಂಡು ಬತುತ್ತಿದೆ ಎಂದು ಡಿಸಿ ಸಭೆಯಲ್ಲಿ ತಿಳಿಸಿದರು.

ಪ್ರತಿ ಮಕ್ಕಳು ನನ್ನ ಕಚೇರಿಗೆ ಬರ್ತಾ ಇದ್ದಾರೆ. 2467 ಶಿಕ್ಷಣ 1836 ಅರ್ಜಿಯಲ್ಲಿ 126 ಅರ್ಜಿಮಾತ್ರ ಸಾಲ ಪಡೆಯಲಾಗಿದೆ. ಯಾರು ಸಾಲ ನೀಡಲು ನಿಯಮ ಪಾಲಿಸುತ್ತಿಲ್ಲ ಅವರಿಗೆ ಸಸ್ಪೆಂಡ್ ಮಾಡಲು ಯೋಜನಾಧಿಕಾರಿಗೆ ಸೂಚಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು