News Karnataka Kannada
Sunday, May 19 2024
ಶಿವಮೊಗ್ಗ

ಪ್ರಣವಾನಂದ ಈಡಿಗ ಸ್ವಾಮೀಜಿ ಅಲ್ಲವೇ ಅಲ್ಲ, ಬುರುಡೆ ಬಿಟ್ಟುಕೊಂಡೇ ಬಂದಿದ್ದಾರೆ: ಸಚಿವ ಮಧುಬಂಗಾರಪ್ಪ

Pranavananda Idiga Swamiji is not Swamiji, he has left his skull: Education Minister Madhu Bangarappa
Photo Credit : News Kannada

ಶಿವಮೊಗ್ಗ:‌ ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌ ವರ್ಸ್‌ಸ್‌ ಸಿಎಂ ಸಿದ್ದರಾಮಯ್ಯ ನಡುವೆ ನಡುವೆ ನಡೆಯುತ್ತಿದ್ದ ಪರೋಕ್ಷ ಯುದ್ದ ಇದೀಗ ರೂಪಾಂತರವಾಗಿದ್ದು, ಇದೀಗ ಶಿಕ್ಷಣ ಸಚಿವ ಮಧುಬಂಗಾರಪ್ಪ ವರ್ಸಸ್‌ ಈಡಿಗ ಸ್ವಾಮೀಜಿ ಪ್ರಣವಾನಂದ ಶ್ರೀ ಎಂಬಂತಾಗಿದೆ.

ನಿನ್ನೆಯಷ್ಟೇ ಸಚಿವ ಮಧು ಬಂಗಾರಪ್ಪ ಅವರ ಬೆಂಬಲಿಗರಿಂದ ನನಗೆ ಜೀವಬೆದರಿಕೆ ಇದೆ ಎಂದು ಹೇಳಿದ್ದ ಪ್ರಣವಾನಂದ ಸ್ವಾಮೀಜಿ ಮೇಲೆ ಇಂದು ಸಚಿವ ಮಧು ಮುಗಿಬಿದ್ದಿದ್ದಾರೆ.

ಪ್ರಣವಾನಂದ ಶ್ರೀ ಈಡಿಗ ಸ್ವಾಮೀಜಿ ಅಲ್ಲವೇ ಅಲ್ಲ. ಸುಮ್ಮನೆ ಬುರುಡೆ ಬಿಟ್ಟುಕೊಂಡೇ ಬಂದಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಣವಾನಂದ ಶ್ರೀಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಣವಾನಂದ ಶ್ರೀ ಈಡಿಗ ಸ್ವಾಮೀಜಿ ಅಲ್ಲವೇ ಅಲ್ಲ ಎಂದು ಮತ್ತೊಮ್ಮೆ ಗುಡುಗಿದರು. ಅವರು ಕಣ್ಣೀರು ಯಾಕೆ ಹಾಕಿದ್ದಾರೆ ತಪ್ಪು ಮಾಡಿದ್ದಾರಾ? ಅವರನ್ನು ಬೇಕಾದಷ್ಟು ನೋಡಿದ್ದೇವೆ. ಇಂತಹ ಬುರುಡೆ ಬಿಟ್ಟುಕೊಂಡೇ ಬಂದಿದ್ದಾರೆ. ಕಳ್ಳತನ ಮಾಡಿದ್ದರೆ, ತಪ್ಪು ಮಾಡಿದ್ದರೆ ಕಣ್ಣೀರು ಹಾಕೋದು ಎಂದು ಕಿಡಿಕಾರಿದರು.

ಪ್ರಣವಾನಂದ ಶ್ರೀಗಳೇನು ಈಡಿಗ ಸಮಾಜದವರಾ? ನಾನೇನು ಅವರ ಜಾತಕ ನೋಡಿಕೊಂಡು ಇರಲಾ. ಅವರ ಹಿನ್ನೆಲೆ ಕೆದುಕಿ ನಿಮಗೆ ಗೊತ್ತಾಗುತ್ತದೆ. ನನ್ನ ವಿರುದ್ದ ಕಮೀಷನರ್, ಸ್ಪೀಕರ್, ಖರ್ಗೆ ಯಾರಿಗೆ ಬೇಕಾದರೂ ದೂರು‌ ಕೊಡಲಿ. ನನಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಸ್ವಾಮೀಜಿ ಅವರು ಸುಮ್ಮನೆ ಪಬ್ಲಿಸಿಟಿ ತಗೊಳ್ಳುತ್ತಾರೆ. ಇಂತಹವರಿಗೆಲ್ಲಾ ಏಕೆ ಪ್ರಚಾರ ಕೊಡುತ್ತೀರಾ? ಹರಿಪ್ರಸಾದ್ ಅವರು ಹಿರಿಯರಿದ್ದಾರೆ ಅವರಿಗೆ ಸ್ಥಾನ ಮಾನ ಕೊಡಬೇಡಿ ಅನ್ನೋಕೆ ನಾನು ಯಾರು? ಎಂದು ಪ್ರಶ್ನಿಸಿದರು.
ಕಾಗೋಡು ತಿಮ್ಮಪ್ಪ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ಎಲ್ಲರೂ ಕೆಲಸ ಮಾಡಬೇಕು . ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರ ಅಧಿಕಾರ ಇದೆ. ಎಲ್ಲ ವಿರೋಧ ಮರೆತು ಬಡವರ ಪರ ಕೆಲಸ ಆಗಬೇಕಿದೆ. ಆಡಳಿತ ಮತ್ತು ವಿರೋಧ ಪಕ್ಷ ತಮ್ಮ ಲಾಭಕ್ಕೆ ಏನು ಕೇಳುತ್ತಿಲ್ಲ. ಬಡವರ ಸಮಸ್ಯೆಯಾಗಿ ಎರಡು ಪಕ್ಷಗಳು ಒಟ್ಟಾಗಬೇಕಿದೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು