ಶಿವಮೊಗ್ಗ: ಬಸ್ ನಿಲ್ದಾಣ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಬಲಗಾಲು ಕಟ್ಟಾದ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಈ ಘಟನೆ ಫೆ. 27ರಂದು ನಡೆದ ಅಪಘಾತ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತಕ್ಕೀಡಾದ ಮಹಿಳೆ ಹಳೆ ಭದ್ರಾವತಿ ಬಳೆಗಾರ ಬೀದಿ ನಿವಾಸಿಯಾದ ಚಂದ್ರಾಬಾಯಿ (52) ಎಂದು ತಿಳಿದುಬಂದಿದೆ.
ಸದ್ಯ ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.