ಶಿವಮೊಗ್ಗ: ಬಿ.ವೈ.ವಿಜಯೇಂದ್ರ ನೇಮಕ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಬಿಜೆಪಿ ಕತೆ ಮುಗಿದಿದೆ. ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಅವರು ಮತ್ತೆ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಜನರು ಬಿಜೆಪಿಯನ್ನ ರಿಜೆಕ್ಟ್ ಮಾಡಿ ತಕ್ಕ ಪಾಠ ಕಲಿಸಿದ್ದಾರೆ. 40 ಪರ್ಸೆಂಟ್ ಸರ್ಕಾರ ಅಂತಾನೆ ಹೆಸರಾಗಿದ್ದ ಬಿಜೆಪಿ ದೇಶದಲ್ಲಿ ಅದೆಷ್ಟೋ ಚುನಾಯಿತ ಸರ್ಕಾರ ಕೆಡವಿ ಹಾಕಿದೆಎಂದರು.
ಪಿಎಸ್ಐ ಪರೀಕ್ಷಾ ಹಗರಣ ಬಯಲು ಮಾಡಿದ್ದೇ ಪ್ರಿಯಾಂಕ್ ಖರ್ಗೆ. ಕೆಇಎ ಪರೀಕ್ಷಾ ಅಕ್ರಮ ಸಂಬಂಧ ಆರ್.ಡಿ.ಪಾಟೀಲ್ನನ್ನು ಬಂಧಿಸಲಾಗಿದೆ. ಆರ್.ಡಿ.ಪಾಟೀಲ್, ಪ್ರಿಯಾಂಕ್ ಖರ್ಗೆಗೆ ನಂಟಿದೆ ಎಂಬ ಬಿಜೆಪಿ ಆರೋಪ ಸುಳ್ಳು ಎಂದರು.