News Karnataka Kannada
Friday, May 03 2024
ಶಿವಮೊಗ್ಗ

ಬಂಗಾರಪ್ಪನವರ ಕೊನೆಯ ಸೋಲನ್ನ ಗೆಲುವಿನ ರೀತಿಯಲ್ಲಿ ಬದಲಿಸಬೇಕಿದೆ: ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಒಳ್ಳೆಯ ರೀತಿಯ ಚುನಾವಣೆ ನಡೆಯುತ್ತಿದೆ. ಬಂಗಾರಪ್ಪನವರ ಕೊನೆಯ ಸೋಲನ್ನ ಗೆಲುವಿನ ರೀತಿಯಲ್ಲಿ ಬದಲಿಸಬೇಕಿದೆ ಅದು ಅಮಿಷವಿಲ್ಲದೆ ಚುನಾವಣೆ ನಡೆಯುವ ಭರವಸೆ ಇದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Photo Credit : NewsKarnataka

ಶಿವಮೊಗ್ಗ: ಶಿವಮೊಗ್ಗದಲ್ಲಿ ಒಳ್ಳೆಯ ರೀತಿಯ ಚುನಾವಣೆ ನಡೆಯುತ್ತಿದೆ. ಬಂಗಾರಪ್ಪನವರ ಕೊನೆಯ ಸೋಲನ್ನ ಗೆಲುವಿನ ರೀತಿಯಲ್ಲಿ ಬದಲಿಸಬೇಕಿದೆ, ಅದು ಅಮಿಷವಿಲ್ಲದೆ ಚುನಾವಣೆ ನಡೆಯುವ ಭರವಸೆ ಇದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಬರದ ವಿಷಯದಲ್ಲಿ ಛೀ ಮಾರಿ ಹಾಕಿದೆ. ರಾಜ್ಯದ ಸಂಸದರಲ್ಲಿ ಒಬ್ಬರೂ ಸಹ ಸಂಸತ್ ನಲ್ಲಿ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ಕೇಂದ್ರ ಸರ್ಕಾರಕ್ಕೆ ಹೋಗಿ ಬಂದರು ಕೇಂದ್ರ ಬರದ ಪರಿಹಾರ ನೀಡಲಿಲ್ಲ. ಜನ ಕಷ್ಟಪಡುತ್ತಿದ್ದಾರೆ. 1.54 ಲಕ್ಷ ಕೋಟಿ ಎನ್ ಡಿ ಆರ್ ಎಫ್ ನಲ್ಲಿ ಹಣ ಬರಬೇಕು ಅದಕ್ಕೂ ಸರ್ಕಾರ ಕೋರ್ಟ್ ಮೊರೆ ಹೋಗುವ ಹಂತಕ್ಕೆ ತಂದಿರುವ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು.

ಎಷ್ಟು ಸುಳ್ಳು ಹೇಳುತ್ತೀರಿ ರಾಘವೇಂದ್ರ ಅವರೆ ಎಂದು ವಾಗ್ದಾಳಿ ನಡೆಸಿದ ಸಚಿವರು. ನ್ಯಾಷನಲ್ ಹೈವೆ ವಿಷಯ, ಏರ್ ಪೋರ್ಟ್ ನಿರ್ಮಿಸಿದನ್ನ ಮೋದಿಯಿಂದ ಉದ್ಘಾಟಿಸಿದ್ದು ನಮ್ಮ ತೆರಿಗೆಯಲ್ಲೇ. ಬಿಜೆಪಿ ಮನೆಯಲ್ಲಿ ಹೊಸಿಟ್ಟುಕೊಂಡು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮಾತನಾಡುವ ನೈತಿಕತೆ ನಿಮಗಿಲ್ಲ.

15 ಲಕ್ಷ ರೂ ಹಣ ಜನರಿಗೆ ಬಂದಿಲ್ಲ. ಟ್ಯಾಕ್ಸ್ ಹೆಚ್ಚಳ ಮಾಡುದ್ರಿ, ರಾಮನ ಹೆಸರಿನಲ್ಲಿ ಬಿಜೆಪಿಗೆ ಶಾಪತಟ್ಟುತ್ತದೆ. ಸರ್ಜಿಕಲ್ ಸ್ಟ್ರೈಕ್, ಪಾಕಿಸ್ತಾನದ ವಿಷಯ ಹಾಗೂ ರಾಮನನ್ನ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಯಾಕೆ ಕೈಬಿಟ್ಟಿತು ಎಂದು ವ್ಯಂಗ್ಯವಾಡಿದರು.

ನಿಮ್ಮ ಹಣೆಬರಹವನ್ನ ಬೀದಿಯಲ್ಲಿಟ್ಟು ಹರಾಜಿಟ್ಟಿರುವ ಈಶ್ವರಪ್ಪನವರಿಗೆ ಉತ್ತರಕೊಡಿ. 1999 ರಲ್ಲಿ ಬಿಎಸ್ ವೈನ್ನ ಸೋಲಿಸಿದ ಬಂಗಾರಪ್ಪ 2004 ರಲ್ಲಿ ಇಬ್ಬರನ್ನೂ ಗೆಲ್ಲಿಸಿದ್ದಾರೆ. ಇಡೀ ದೇಶದಲ್ಲಿ 32 ವರ್ಷದ ಹಿಂದೆ ಬಂಗಾರಪ್ಪನವರು ಅಕ್ಕಿ ವಿತರಿಸಿದ್ದರು. ಆದರೆ ನಿಮ್ಮ ಭಾರತ್ ಅಕ್ಕಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಸಚಿವರು ಗೀತಾರ ವಿಷಯಕ್ಕೆ ಬರಬೇಡಿ ಎಂದು ಎಚ್ಚರಿಸಿದರು.

10 ಕೆಜಿ ಅಕ್ಕಿಯ ವಿಷಯದಲ್ಲಿ ಸಿದ್ದರಾಮಯ್ಯನವರು ಕೊಡಲಿಲ್ಲ ಎಂದು ಆರೋಪಿಸಿರುವ ಸಂಸದರು ಭಾರತ್ ಅಕ್ಕಿ ಎಲ್ಲಿ ಹೋಯಿತು ಎಂದು ಮೊದಲು ಉತ್ತರಿಸಬೇಕು. ಇದಕ್ಕೆ ಉತ್ತರಿಸದ ನೀವು ಗೀತಾ ಶಿವರಾಜ್ ಕುಮಾರ್ ಬಗ್ಗೆ ಮಾತನಾಡುತ್ತೀರ ಎಂದು ಗರಂ ಆದರು.

ಏ.15 ರಂದು ಗೀತಾ ಶಿವರಾಜ್ ಕುಮಾರ್ ಅವರು ರಾಮಣ್ಣ ಶ್ರೇಷ್ಟಿ ಪಾರ್ಕ್ ನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ತಲುಪಲಿದೆ. ನಂತರ ಬಹಿರಂಗ ಸಭೆ ನಡೆಯಲಿದೆ ಎಂದರು.

ಕಳೆದ ವರ್ಷದ ವಿಧಾನ ಸಭೆ ಚುನಾವಣೆಯಲ್ಲಿ ಕೇವಲ ಬಿಜೆಪಿಯನ್ನ ಸೋಲಿಸಿಲ್ಲ. ಹಿಂದುತ್ವಮತ್ತು ಹಿಂದುತ್ವವಾದಿಗಳನ್ನ ಸೋಲಿಸಿದ್ವಿ. ಕಳೆದ ಬಾರಿ ಬೀದಿ ಬೀದಿಯಲ್ಲಿ ಮೋದಿ ಬಂದು ಹೋದರು. ಬಿಜೆಪಿಯ ಅಭ್ಯರ್ಥಿಗಳು ಸೋಲುಂಡರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರೆಂಟಿಯ ಮೇಲೆ ಮತ್ತೆ ಚುನಾವಣೆಯನ್ನ‌ ಎದುರಿಸಿ ಗೆಲ್ಲಲಿದ್ದೇವೆ ಎಂದರು.

ಈಶ್ವರಪ್ಪನವರು ಬಿಜೆಪಿಯ ಬಿ ಟೀಂ. ಅವರ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಯ ಸ್ಪರ್ಧೆಗೆ ಹಿನ್ನಡೆಯಾಗಲ್ಲ. ಯಾರು ರಾಜಕಾರಣದಲ್ಲಿ ಹಾಳು ಮಾಡಿದ್ದಾರೆ‌ ಅವರ ವಿರುದ್ಧ ಹೋರಾಡುವ ಸ್ಥಿತಿ ಬಿಜೆಪಿಯ ಒಳಗೆ ನಿರ್ಮಾಣವಾಗಿದೆ. ಈಶ್ವರಪ್ಪನವರು ವೈಯುಕ್ತಿಕವಾಗಿ ನೊಡಿ ಬೇಸರವಾಗುತ್ತೆ. ಆದರೆ ಅವರ ಸಿದ್ದಾಂತವನ್ನ ನೋಡಿ ಮರುಕ ಹುಟ್ಟುತ್ತಿಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು