ಶಿವಮೊಗ್ಗ: ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ 2805ಕ್ಕೆ ಏರಿಕೆಯಾಗಿದೆ. 365 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.
ಶಿವಮೊಗ್ಗ ತಾಲ್ಲೂಕಿನ 359 ಮಂದಿಗೆ ಸೋಂಕು ದೃಢಪಟ್ಟಿದ್ದು, ಭದ್ರಾವತಿಯ 161, ತೀರ್ಥಹಳ್ಳಿಯ 45, ಶಿಕಾರಿಪುರದ 46, ಸಾಗರದ 118, ಹೊಸನಗರದ 99, ಸೊರಬದ 28 ಹಾಗೂ ಹೊರ ಜಿಲ್ಲೆಯಿಂದ ಬಂದ 14 ಮಂದಿಗೆ ಸೋಂಕು ತಗುಲಿದೆ.
ಸೋಂಕಿತರ ಪೈಕಿ 58 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸಿಎಚ್ಸಿಯಲ್ಲಿ 27, ಹೋಮ್ ಐಸೊಲೇಷನ್ನಲ್ಲಿ 2653, ಟ್ರಯೇಜ್ನಲ್ಲಿ 58 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.