News Karnataka Kannada
Thursday, May 02 2024
ಶಿವಮೊಗ್ಗ

‘ಕಸ ಕೊಡಿ, ಹಣ ಪಡಿ’ ಕಾರ್ಯಕ್ರಮಕ್ಕೆ ಚನ್ನವೀರಪ್ಪ ಗಾಮನಗಟ್ಟಿ ಚಾಲನೆ

Shimogga
Photo Credit :

ಶಿವಮೊಗ್ಗ: ನಗರದ ಕರ್ನಾಟಕ ಸಂಘ, ಮೈನ್ ಮಿಡ್ಲ್ ಶಾಲಾವರಣದಲ್ಲಿ ಕಸ ಕೊಡಿ, ಹಣ ಪಡಿ, ಕಾರ್ಯಕ್ರಮಕ್ಕೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು, 25 ಲೀಟರನ ಎಣ್ಣೆ ಕ್ಯಾನ್ ಬೀದಿ ಬದಿಯ ವ್ಯಾಪಾರಿಗಳಿಗೆ ನೀಡುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವುಗಳು ಮನೆಗಳಿಗೆ ಯಾವುದೇ ರೀತಿಯ ಕಸವನ್ನು ತರುವುದಿಲ್ಲ ನಾವುಗಳು ದುಬಾರಿ ಹಣವನ್ನು ಕೊಟ್ಟು ಹಣ್ಣು, ಹಂಪಲುಗಳು ತರಕಾರಿಗಳು ಕರಿದಿಸುತ್ತಿವಿ ಆದರೆ ಮನೆಗೆ ಬಂದಾಗ ಬಹಳಷ್ಟು ವಸ್ತುಗಳು ಆಳಗಿರುತ್ತೆವೆ. ಅವುಗಳು ನಮಗೆ ಬೇಡವಾದಾಗ ಮಾತ್ರ ಅವುಗಳು ಕಸಗಳಾಗಿ ಕಾಣತೋಡುತ್ತವೆ.

ಅವುಗಳು ಸಂಗ್ರಹಿಸಿ ಇಟ್ಟು ಘಂಟೆ ಗಾಡಿ ಬರದೆ ಇದ್ದಾಗ ಅದರ ವಾಸನೆ ತಾಳಲಾರದೆ ರಾತ್ರೆ ವೇಳೆ ಇನ್ನೊಬ್ಬರ ಕಾಂಪೌಂಡ್ ನಲ್ಲಿ ಅವರು ಇಲ್ಲದೆ ವೇಳೆ ಸುರಿದು ಬಂದು ಯಾರಿಗೂ ತಿಳಿಯದಂತೆ ನಿದ್ರಿಸುವೇವೂ. ಆದರೆ ಕಸದಿಂದ ಗೊಬ್ಬರ ಹಾಗೂ ಪ್ಲಾಸ್ಟಿಕ್ ವಸ್ತುಗಳಿಂದ ಇತರೆ ಪುನರ್ ಬಳಸುವ ವಸ್ತುಗಳಾಗಿವೆ ಮಾರ್ಪಡುತ್ತಿವೆ.

ಎಲ್ಲಾ ರೀತಿಯ ಕಸವ ಕೊಡಿ ಹಣವ ಪಡಿ ಎಂದು ಕಂಪನಿಗಳು ಮುಂದೆ ಬಂದಿವೆ, ಆದರೆ ಸಾರ್ವಜನಿಕರಿಗೆ ಇದರ ಬಗ್ಗೆ ಹರಿವಿನ ಕೊರತೆ ಕಾಣುತ್ತಿದೆ. ಇಂದು M11 Industris pvt.LTD RUCO (ಯೂಕೊ) ಕಂಪನಿಯು ನಿವೂಗಳು ತಿಂಡಿ ತಿನಿಸು ಪದಾರ್ಥಗಳ ಕರಿದ ತಿನ್ನಲು ಯೋಗ್ಯವಲ್ಲದ ಎಣ್ಣೆಯನ್ನು ಎಲ್ಲೂ ಚಲ್ಲದೆ ನಮಗೆ ನೀಡಿ ಅದಕ್ಕೆ ಒಂದು ಲೀಟರ್ ಗೆ ಇಷ್ಟು ಹಣ ನೀಡುತ್ತೇವೆ, ನಾವುಗಳು ಇದರಿಂದ ಬಯೊ ಡೀಸೇಲ್ ತಯಾರಿಸುತ್ತೇವೆ, ಎಂದು ಮುಂದೆ ಬಂದಿವೆ. ಹಾಗಾಗಿ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಯೂಕೊ ಕಂಪನಿಯ ಕರಿದ ಎಣ್ಣೆ ನೀಡಲು 25 ಲೀಟರನ ಕ್ಯಾನ್ ಉಚಿತ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ M11 Industris ಚೀಫ್ ಬಿಸಿನೆಸ್ ಆಫೀಸರ್ ಶ್ರೀ ಚಂದ್ರಶೇಖರ, ಯೂಕೊ ಮ್ಯಾನೇಜರ್ ಶ್ರೀ ರಾಜೇಶ್ ತ್ಯಾಗರಾಜನ್, ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಗಳ ಪದಾಧಿಕಾರಿಗಳಾದ ಶ್ರೀ ದಿನೇಶ್, ಮಣಿ ಗೌಂಡರ್, ಶ್ರೀ ಮತಿ ರಂಗಮ್ಮ ಹನುಮಂತಪ್ಪ, ಶ್ರೀ ಬಸವರಾಜ್ ಶ್ರೀ ಚಂದ್ರಪ್ಪ ಹಾಗೂ ಇತರರೂ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು