News Karnataka Kannada
Sunday, April 28 2024
ಶಿವಮೊಗ್ಗ

ಶಿವಮೊಗ್ಗದಲ್ಲಿ ವೈದ್ಯರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸರ್ಕಾರಕ್ಕೆ ಮನವಿ

Shivamogga News
Photo Credit :

ಶಿವಮೊಗ್ಗ: ನಗರದ ಪ್ರತಿಷ್ಠಿತ ಮೆಗ್ಗನ್ ಆಸ್ಪತ್ರೆಯ ಕೆಲವು ವೈದ್ಯರುಗಳಿಗೆ ಸಂಬಂಧಪಟ್ಟ ಹಣ ಬಿಡುಗಡೆ ಮಾಡದಿರುವುದು ಹಾಗೂ ನಿರಂತರ ಎಲ್ಲಾ ಸಂದರ್ಭದಲ್ಲೂ ಮತ್ತು ಕೋವಿಡ್ ಒಂದು ಮತ್ತು ಎರಡನೆ ಅಲೆಯಲ್ಲಿ ನಗರದ ವೈದ್ಯರು ತಮ್ಮ ಪ್ರಾಣವನ್ನು ಅಡವಿಟ್ಟು, ಪ್ರಾಣವನ್ನು ತೆತ್ತಿ ಅನೇಕರ ಜೀವವನ್ನು ಉಳಿಸಿರುವುದು ತಮಗೆ ಗೊತ್ತಿರುವ ವಿಷಯವಾಗಿದೆ.

ಶಿವಮೊಗ್ಗ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆ ಆದ ಮೆಗ್ಗನ್ ಆಸ್ಪತ್ರೆಯಲ್ಲಿ ಸೀನಿಯರ್ ರೆಸಿಡೆಂಟ್ ಆಗಿ 9 ಜನ ವೈದ್ಯರು ತಮ್ಮ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಸೀನಿಯರ್ ರೆಸಿಡೆಂಟ್ ಒಬ್ಬರಿಗೆ 60 ಸಾವಿರ ರೂಪಾಯಿ ಸಂಬಳವಿರುತ್ತದೆ. 4 ತಿಂಗಳಿನಿಂದ ಸಂಬಳ ಬಂದಿರುವುದಿಲ್ಲ.

ಕೋವಿಡ್ ಸಂದರ್ಭದಲ್ಲಿ ರಿಸ್ಕ್ ಅಲೈನ್ಸ್ ಕೊಡುವುದಾಗಿ ಸರ್ಕಾರ ಫೋಷಣೆ ಮಾಡಿತ್ತು. ರಿಸ್ಕ್ ಅಲೈನ್ಸ್ ಎಂದರೆ ತಮ್ಮ ಜೀವಕ್ಕೆ ಯಾವುದೇ ರೀತಿ ಹಂಗು ಬಂದರು ಹೆದರದೆ ಮಾಡುವ ಕೆಲಸ. ಇಂಟರ್ನ್ ಮಾಡುತ್ತಿರುವ ವೈದ್ಯರು, ಪೋಷ್ಟ್ ಗ್ರಾಜುಯೇಷನ್ ಮಾಡುತ್ತಿರುವ ವೈದ್ಯರು, ಸೀನಿಯರ್ ರೆಸಿಡೆಂಟ್ ಇವರುಗಳು ಶಿವಮೊಗ್ಗ ನಗರದ ಮೆಗ್ಗನ್ ಆಸ್ಪತ್ರೆಯಲ್ಲಿ ಸುಮಾರು 150 ಜನ ವೈದ್ಯರು ಇರುತ್ತಾರೆ. ಇವರಿಗೆ 10 ಸಾವಿರ ರೂಪಾಯಿ ಪ್ರತಿ ತಿಂಗಳು ಕೊಡುವುದಾಗಿ ತಿಳಿಸಿದ್ದರು. ಇದೇ ರೀತಿ ಸುಮಾರು 6 ತಿಂಗಳಿನಿಂದ ಹಣ ಬಿಡುಗಡೆ ಆಗಿರುವುದಿಲ್ಲ.

ಪಿ.ಜಿ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ಆಗಿರುವುದಿಲ್ಲ ಇದರಿಂದ ಹೊಸದಾಗಿ ಪಿ.ಜಿ ವಿದ್ಯಾರ್ಥಿಗಳ ಸೇರ್ಪಡೆ ಕಾಲೇಜಿಗೆ ಆಗುತ್ತಿಲ್ಲ. ಇದರ ಪರಿಣಾಮ 2 ಮತ್ತು 3 ನೇ ವರ್ಷದ ಪಿ.ಜಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಬೀಳುತ್ತಾ ಇದ್ದೆ ಈಗಾಗಲೇ ಅನೇಕ ಪಿ.ಜಿ ವಿದ್ಯಾರ್ಥಿಗಳು ಕೋವಿಡ್ 1 ಮತ್ತು 2 ನೇ ಅಲೆಯಲ್ಲಿ ತಮ್ಮ ವೃತ್ತಿಯನ್ನ ಅಚ್ಚುಕಟ್ಟಾಗಿ ಮಾಡಿದ್ದು ಅನೇಕ ವಿದ್ಯಾರ್ಥಿಗಳು ಕೋವಿಡ್ ಗೆ ತುರ್ತಾದರು ಸಹ ಗುಣಮುಖರಾದ ಮೇಲೆ ಮತ್ತೆ ತಮ್ಮ ವೃತ್ತಿಯನ್ನು ಮುಂದುವರೆಸುಕೊಂಡು ಹೋಗಿರುವ ಸಂದರ್ಭವನ್ನು ನಾವೆಲ್ಲರು ನೋಡಿದ್ದೇವೆ.

ಪಿ.ಜಿ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಏಕಾಏಕಿ ಕೋವಿಡ್ 1 ನೇ ಅಲೆಯಲ್ಲಿ 4 ಪಟ್ಟು ಹೆಚ್ಚಿಸಿರುವುದು ಕಂಡನಿಯ ಇದರಿಂದ ಬಡ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ ತತಕ್ಷಣ ಹಿಂಪಡೆಯಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿವೆ.

ಸರ್ಕಾರದಿಂದ ರಾಜ್ಯಾದ್ಯಂತ ಸರ್ಕಾರಿ ವೈದ್ಯಕಿಯ ಶಿಕ್ಷಣ ಸಂಸ್ಥೆಗಳಿಗೆ ಸುಮಾರು 73 ಕೋಟಿ ರೂಪಾಯಿ ಬಿಡುಗಡೆ ಆಗಬೇಕಾಗಿದೆ. ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಅನೇಕ ವೈದ್ಯಕಿಯ ವಿದ್ಯಾರ್ಥಿಗಳು ನಿರಂತರವಾಗಿ ಮುಷ್ಕರವನ್ನು ಮಾಡುತ್ತಿದ್ದಾರೆ ಪ್ರಪಂಚಾದ್ಯಂತ ಓಮಿಕ್ರಾನ್ ಎಂಬುವ ವೈರಸ್ ಅನೇಕ ರಾಷ್ಟಗಳಿಗೆ ಹರಡಿದೆ. ಈಗಾಗಲೇ ಅನೇಕ ರಾಷ್ಟಗಳು ಲಾಕ್ ಡೌನ್ ಮಾಡಿದ್ದಾರೆ. ಭಾರತದಲ್ಲೂ ಸಹ ಓಮಿಕ್ರಾನ್ ಎಂಬ ವೈರಸ್ ಕೆಲವು ಭಾಗದಲ್ಲಿ ಕಂಡುಕೊಂಡಿದೆ ಮುಷ್ಕರ ಮಾಡಿತ್ತಿರುವ ವೈದ್ಯರುಗಳನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ.

ಮುಷ್ಕರದಿಂದ ಆಸ್ಪತ್ರೆಯಲ್ಲಿ ರೋಗಿಗಳು ಸಹ ಪರದಾಡುತ್ತಿದ್ದಾರೆ, ವೈದ್ಯರು ತಾವು ಮಾಡಿರುವ ಸೇವೆಗೆ ಸರ್ಕಾರ ಕೊಟ್ಟಿರುವ ಬರವಸೆಯನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ ಕೋವಿಡ್ ಸಂದರ್ಭದಲ್ಲಿ ವೈದ್ಯರನ್ನು ದೇವರುಗಳು ಎಂದು ಹೇಳಿರುವ ರಾಜ್ಯ ಸರ್ಕಾರ ಇಂದಿನ ಸಂದರ್ಭ ನೋಡಿದರೆ ಈ ಎಲ್ಲಾ ಮಾತುಗಳು ನಾಟಕಿಯವೆನಿಸುತ್ತದೆ ಆದ್ದರಿಂದ ಕೂಡಲೆ ಸರ್ಕಾರ ವೈದ್ಯರ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ವೈದ್ಯರನ್ನು ಗೌರವದಿಂದ ಕಾಣಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿಯಾದ ಕೆ ದೇವೇಂದ್ರಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಪಿ ಗಿರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕೆ ರಂಗನಾಥ್ ಅವರು, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ್ ರವರು, ಡಿಕೆ ಶಿವಕುಮಾರ್ ಅಭಿಮಾನಿ ಬಳಗ ಅಧ್ಯಕ್ಷರಾದ ಮೋಹನ್ ರವರು ಡಾಕ್ಟರ್ ದಿನೇಶ್, ಎಸ್ ಎಂ ಶರತ್ ರವರು ಹಾಗೂ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು