ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ನಿಂಬೆಗೊಂದಿ ಗ್ರಾಮದಲ್ಲಿ ಎಲೆಕ್ಟ್ರಿಕ್ ಬೈಕ್ ಸ್ಪೋಟಗೊಂಡು ಸುಟ್ಟು ಕರಕಲಾಗಿದೆ.
ಅಡಿಕೆ ಮನೆಯಲ್ಲಿ ಬೈಕ್ ಸಹಿತ ಬ್ಯಾಟರಿ ಚಾರ್ಜರ್ ಮಾಡುವಾಗ ರಾತ್ರಿ 11 ಗಂಟೆ ಸುಮಾರಿಗೆ ಬ್ಯಾಟರಿ ಸ್ಪೋಟಗೊಂಡು ಬೈಕ್ ಸುಟ್ಟು ಕರಕಲಾಗಿದೆ.
ಮಲ್ಲಿಕಾರ್ಜುನ ಎಂಬವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಇದಾಗಿದೆ.ಸಮೀಪದಲ್ಲೇ ಮಲಗಿದ್ದ ಮಲ್ಲಿಕಾರ್ಜುನ್ ಎಚ್ಚರಗೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಈ ವೇಳೆಗಾಗಲೇ ಬೈಕ್, ಹಾಸಿಗೆ ಸುಟ್ಟು ಹೋಗಿವೆ ಎನ್ನಲಾಗಿದೆ.