News Karnataka Kannada
Monday, May 13 2024
ಮಲೆನಾಡು

ಗಾಯಗೊಂಡಿದ್ದ ಕಾಡಾನೆಗೆ ಚಿಕಿತ್ಸೆ ನೀಡುವ ವೇಳೆ ಶಾರ್ಪ್ ಶೂಟರ್‌ ಮೇಲೆ ದಾಳಿ

Sharpshooter attacked while treating injured wild elephant
Photo Credit : News Kannada

ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಕಾಡನೆ ಹಾವಳಿ ತೀವ್ರವಾಗಿದೆ. ಗಾಯಗೊಂಡಿದ್ದ ಭೀಮ ಕಾಡಾನೆಗೆ ಚಿಕಿತ್ಸೆ ನೀಡುವ ಸಲುವಾಗಿ ಶಾರ್ಪ್ ಶೂಟರ್‌ ಮುಖಾಂತರ ಅರವಳಿಕೆ ನೀಡಿದ ಸಂದರ್ಭದಲ್ಲಿ ಭೀಮ ಕಾಡಾನೆ ಅರಣ್ಯ ಇಲಾಖೆ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ದಾಳಿ ನಡೆಸಿದ ಘಟನೆ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಆ.31ರಂದು ಬೆಳಗ್ಗೆ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡ ವೆಂಕಟೇಶ್ ಅವರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗಾದೆ ವೆಂಕಟೇಶ್ ಮೃತಪಟ್ಟಿದ್ದಾರೆ.

ಆಲೂರು ತಾಲೂಕಿನಲ್ಲಿ ಹಳ್ಳಿಯೂರಿನಲ್ಲಿ ಭೀಮ ಕಾಡಾನೆ ಗಾಯಗೊಂಡು ತಿರುಗಾಡುತ್ತಿದ್ದು, ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿದ್ಧು, ಈ ಹಿನ್ನೆಲೆಯಲ್ಲಿಕಾಡಾನೆಗೆ ಅರೆವಳಿಕೆ ಮದ್ಧು ನೀಡಲು ಶಾರ್ಪ್ ಶೂಟರ್ ವೆಂಕಟೇಶ್ ಮುಂದಾದಾಗ ಏಕಾಏಕಿ ಕಾಡಾನೆ ವೆಂಕಟೇಶ್ ಅವರನ್ನು ತುಳಿದು ಹಾಕಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು