News Karnataka Kannada
Saturday, April 20 2024
Cricket
ಚಿಕಮಗಳೂರು

ರೋಬಸ್ಟಾ ಕಾಫಿ, ಕಾಳು ಮೆಣಸು ಹಾಗೂ ಏಲಕ್ಕಿ ಬೆಲೆ ಕುಸಿತ

ವಾಣಿಜ್ಯ ಬೆಳೆಗಳ ಬೆಲೆ ಕುಸಿತ ಬೆಳೆಗಾರರ ಮುಖದಲ್ಲಿನ ಮಂದಹಾಸ ಕುಂದುವಂತೆ ಮಾಡಿದೆ. ರೋಬಸ್ಟಾ ಕಾಫಿ, ಕಾಳು ಮೆಣಸು ಹಾಗೂ ಏಲಕ್ಕಿ ಬೆಲೆ ಕುಸಿತವಾಗಿದ್ದು ವಾಣಿಜ್ಯ ಬೆಳೆಗಾರರಿಗೆ ಲಕ್ಷಾಂತರ ಹಣ ನಷ್ಟವಾಗಿದೆ.
Photo Credit : News Kannada

ಚಿಕ್ಕಮಗಳೂರು :  ವಾಣಿಜ್ಯ ಬೆಳೆಗಳ ಬೆಲೆ ಕುಸಿತ ಬೆಳೆಗಾರರ ಮುಖದಲ್ಲಿನ ಮಂದಹಾಸ ಕುಂದುವಂತೆ ಮಾಡಿದೆ. ರೋಬಸ್ಟಾ ಕಾಫಿ, ಕಾಳು ಮೆಣಸು ಹಾಗೂ ಏಲಕ್ಕಿ ಬೆಲೆ ಕುಸಿತವಾಗಿದ್ದು ವಾಣಿಜ್ಯ ಬೆಳೆಗಾರರಿಗೆ ಲಕ್ಷಾಂತರ ಹಣ ನಷ್ಟವಾಗಿದೆ.

ಹೌದು… ಸಕಲೇಶಪುರ ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ರೋಬಸ್ಟ್‌ಕಾಫಿ ಧಾರಣೆ ಕಳೆದ ವರ್ಷದ ಮಾರುಕಟ್ಟೆ ಆರಂಭದಲ್ಲಿ50ಕೆ.ಜಿಗೆ 4200 ರೂಪಾಯಿಗಳಿಂದ ಆರಂಭವಾಗಿ ಕೇವಲ3 ತಿಂಗಳಲ್ಲಿ ೬೮೦೦ ಕ್ಕೆ ಏರಿಕೆಯಾಗುವ ಮೂಲಕ ಐತಿಹಾಸ ನಿರ್ಮಿಸಿದ್ದರೆ, ಈ ಬಾರಿ ಮಾರುಕಟ್ಟೆ ಆರಂಭವಾದ ಡಿಸೆಂಬರ್ ತಿಂಗಳಿನಲ್ಲಿ ರೋಬಸ್ಟಾ ಚರಿ ಕಾಫಿ ಧಾರಣೆ
6800 ರೂಪಾಯಿಗಳಿಂದ ಆರಂಭವಾಗಿ ಕೇವಲ ಒಂದು ತಿಂಗಳಿನಲ್ಲಿ7800 ರೂಪಾಯಿಗಳನ್ನು ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು.

ಈ ಬಾರಿ ಕಾಫಿ ಕೊಯ್ಲು ನಡೆಸುವ ವೇಳೆ ಆಕಾಲಿಕ ಮಳೆ ಹಾಗೂ ಮೋಡ ಮುಸುಕಿದ ವಾತಾವಾರಣದಿಂದಾಗಿ ಜನವರಿ ತಿಂಗಳೊಂದರಲ್ಲೇ ಹೆಚ್ಚಾಗಿ ಕಾಫಿ ಕೊಯ್ಲು ನಡೆಸಲಾಗಿದ್ದು, ಏಕಕಾಲಕ್ಕೆ ಮಾರುಕಟ್ಟೆಗೆ ಬಂದ ಕಾಫಿ ೭೪೦೦ ರೂಪಾಯಿಗಳಿಂದ ೭೮೦೦ ರೂಪಾಯಿಗಳವರೆಗೆ ಬಿಕರಿಯಾಗಿತ್ತು.

ಆದರೆ ಕಾಫಿ ಧಾರಣೆ 8000 ಸಾವಿರ ಗಡಿದಾಟಿ ಮುನ್ನಡೆಯಲಿದೆ ಎಂಬ ಮಾರುಕಟ್ಟೆ ತಜ್ಞರ ಅಭಿಪ್ರಯಾದಿಂದ ಸಾಕಷ್ಟು ಕಾಫಿ ಬೆಳೆಗಾರರು ಬೆಳೆದ ಕಾಫಿಯನ್ನು ಸಂಗ್ರಹಿಸಿಟ್ಟಿದ್ದಾರೆ. ಆದರೆ ಪ್ರಸಕ್ತ ದಿನಗಳ ಮಾರುಕಟ್ಟೆಯಲ್ಲಿ ಓಟಿ ದರದಲ್ಲೂ ಕುಸಿತ ಕಂಡಿದೆ. ಕಳೆದ ಒಂದುವಾರದ ವರೆಗೆ ಪ್ರತಿ ಓಟಿ ದರ ೨೮೦ ರೂಗಳ ಅಸುಪಾಸಿನಲ್ಲಿದ್ದರೆ, ಪ್ರಸಕ್ತ ಓಟಿ ದರ 270 ರೂಗಳಿಗೆ ಕುಸಿದಿದೆ.

ಇದರಿಂದಾಗಿ ಹೆಚ್ಚಿನ ದರದ ನಿರೀಕ್ಷೆಯಲ್ಲಿ ಕಾಫಿ ಸಂಗ್ರಹಿಸಿಟ್ಟಿದ್ದ ಬೆಳೆಗಾರರ ನಿರಾಸೆಗೆ ಕಾರಣವಾಗಿದೆ. ಓಟಿ ಸಮಸ್ಯೆ: ಸಕಲೇಶಪುರ ತಾಲೂಕಿನಲ್ಲಿ ಏಪ್ರಿಲ್ ತಿಂಗಳ ನೆನಪಿಸುವಂತೆ ಉಷ್ಣಾಂಶ ದಾಖಲಾಗುತ್ತಿದ್ದು,34 ರಿಂದ 38 ಡಿಗ್ರಿ ಉಷ್ಣಾಂಶದಿಂದಾಗಿ ಕಾಫಿ ಅತಿಬೇಗ ಒಣಗುತ್ತಿದೆ.

ಫೆಬ್ರವರಿ ತಿಂಗಳಿನಲ್ಲಿ ಹಣ್ಣುಕೊಯ್ಲು ನಡೆಸಿದ ಬಹುತೇಕ ಬೆಳೆಗಾರರ ಕಾಫಿಗೆ ಓಟಿ ಸಮಸ್ಯೆ ಕಾಡುತ್ತಿದೆ. ಸಾಮಾನ್ಯವಾಗಿ ಜನವರಿ ತಿಂಗಳಿನಲ್ಲಿ ಕಾಫಿ ಕೊಯ್ಲು ನಡೆಸಿದ ತೋಟಗಳಲ್ಲಿ50 ಕೆ.ಜಿ ಕಾಫಿ 26 ರಿಂದ 28 ಓಟಿ (ಓವರ್ ಟನ್) ಬಂದರೆ, ಫೆಬ್ರವರಿ ತಿಂಗಳಲ್ಲಿ ಕೊಯ್ಲು ನಡೆಸಿದ ಬೆಳೆಗಾರರ ಕಾಫಿ 22 ರಿಂದ 25ಓಟಿ ದಾಖಲಾಗುತ್ತಿದೆ.

ಇದರಿಂದಾಗಿ ಜನವರಿ ತಿಂಗಳಲ್ಲಿ ಕಾಫಿ ಹಣ್ಣು ಕೊಯ್ಲು ನಡೆಸಿದ ಬೆಳೆಗಾರರಿಗೆ 7400 ರೂಪಾಯಿಗಳಿಂದ 7800 ರೂಪಾಯಿಗಳವರೆಗೆ ದರ ದೊರೆತರೆ ಫೆಬ್ರವರಿ ತಿಂಗಳಿನಲ್ಲಿ ಕಾಫಿ ಕೊಯ್ಲು ನಡೆಸಿದ ಬೆಳೆಗಾರರಿಗೆ 6800 ರೂಪಾಯಿಗಳಿಂದ 7100 ರೂಪಾಯಿಗಳವೆರೆಗ ಧಾರಣೆ ದೋರೆಯುತ್ತಿದೆ.

ಕಾಳು ಮೆಣಸು ಧಾರಣೆ ಕುಸಿತ: ರೈತ ಕಂಗಾಲು ಕಳೆದ ಆರು ತಿಂಗಳಿನಿಂದ ಪ್ರತಿ ಕೆ.ಜಿ ಮೆಣಸಿನ ಧಾರಣೆ ಆರು ನೂರು ರೂಪಾಯಿಗಳ ಗಡಿಯಲ್ಲಿದ್ದರೆ ಕಾಳು ಮೆಣಸು ಕೊಯ್ಲು ಆರಂಭದ ವೇಳೆ ಪ್ರತಿ ಕೆಜೆ ಮೆಣಸಿನ ಬೆಲೆ ಬರೋಬ್ಬರಿ ನೂರು ರೂಪಾಯಿಗಳ ಕುಸಿತ ಕಂಡಿದ್ದು480 ರಿಂದ500ರೂಗಳ ದರದಲ್ಲಿ ಮಾರಾಟವಾಗುತ್ತಿದೆ.

ಇದು ಮೆಣಸು ಬೆಳೆಗಾರರ ಸಂತಸವನ್ನೆ ಕಸಿದಿದೆ. ತೂಕ ಕೂಡ ಇಲ್ಲ: ಸಾಮಾನ್ಯವಾಗಿ 2.5 ರಿಂದ 3 ಕೆಜಿ ಹಸಿಕಾಳು ಮೆಣಸು ಕೊಯ್ಲು ನಡೆಸಿದರೆ ಒಂದು ಕೆ.ಜಿ ಒಂದು ಕಾಳಮೆಣಸು ದೊರೆಯುತ್ತದೆ ಎಂಬ ವಾಡಿಕೆ ಜಾರಿಯಲ್ಲಿತ್ತು.

ಆದರೆ ಈ ಬಾರಿ ಅತ್ಯಧಿಕ 3.53 ಉಷ್ಣಾಂಶದ ಕಾರಣ ಕಾಲೂ ಮೆಣಸಿನಲ್ಲಿ ನೀರಿನಾಂಶ ಅವಿಯಾಗಿರುವ ಕಾರಣ ಒಂದು ಕೆಜಿ ಒಣ ಕಾಳೂ ಮೆಣಸು ಪಡೆಯಲು 3 ರಿಂದ 3.5 ಕೆ.ಜಿ ಕಾಳುಮೆಣಸಿನ ಅಗತ್ಯವಿದೆ ಎನ್ನಲಾಗುತ್ತಿದೆ.

ಅಲ್ಲದೆ ಸಾಕಷ್ಟು ತೋಟಗಳಲ್ಲಿ ಮೆಣಸು ಸಾಮಾನ್ಯ ಗಾತ್ರ ಮೂಡದೆ ಇರುವುದು ಕಾಳುಕಟ್ಟದೆ ಇರುವ ಪ್ರಕರಣಗಳು ಸಾಕಷ್ಟಿದೆ. ಇದರಿಂದಾಗಿ ಬೆಳೆಗಾರರು ಹಾಗೂ ಕಾಫಿ ತೋಟವನ್ನು ಪಸಲಿಗೆ ಪಡೆದಿರುವ ವ್ಯಾಪಾರಗಾರರು ತೂಕ ಹಾಗೂ ಧಾರಣೆ ಕುಸಿತದಿಂದ ಕಂಗಾಲಾಗಿದ್ದಾರೆ.

ಏಲಕ್ಕಿ ದರವೂ ಕುಸಿತ: ಕಳೆದ ಎರಡು ವಾರದವರೆಗೂ ಹೆರಕಿದ ಏಲಕ್ಕಿ ದರ ಪ್ರತಿ ಕೆಜಿ ಏಲಕ್ಕಿಗೆ 2000 ಸಾವಿರದಿಂದ 2200 ರೂಗಳಿಗೆ ಮಾರಾಟವಾಗುತ್ತಿದ್ದರೆ, ಜರಡಿ ಮಾಡಿದ ಏಲಕ್ಕಿ ಧಾರಣೆ 1700 ರೂ ಗಳಿಂದ 1900 ರೂಗಳ ದರದಲ್ಲಿ ಮಾರಾಟವಾಗುತ್ತಿತ್ತು.

ಇನ್ನೂ ರಾಶಿ ಏಲಕ್ಕಿ 1450 ಅಸುಪಾಸಿನಲ್ಲಿ ಮಾರಾಟವಾಗುತ್ತಿದ್ದರೆ ಪ್ರಸಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಏಲಕ್ಕಿ ಧಾರಣೆ ಇನ್ನೂರುಗಳ ಕುಸಿತಗೊಂಡಿದ್ದು ಸದ್ಯ ಹೆರಕಿದ ಏಲಕ್ಕಿ 1800ರೂಗಳಿಂದ 2000 ಸಾವಿರದವರೆಗೆ ಮಾರಾಟವಾತ್ತಿದ್ದರೆ, ಜರಡಿ ಮಾಡಿದ ಏಲಕ್ಕಿ ಧಾರಣೆ ಸದ್ಯ1500 ರೂಗಳಿಂದ 1600 ರೂಪಾಯಿಗಳಲ್ಲಿ ಮಾರಾಟವಾಗುತ್ತಿದೆ.

ಕೂಲಿ ಕಾರ್ಮಿಕರ ಐಟಿ-ಬಿಟಿ ಸಂಪಾದನೆ: ತಾಲೂಕಿನಲ್ಲಿ ಸ್ಥಳೀಯ ಕೂಲಿ ಕಾರ್ಮಿಕರ ಕೊರತೆಯನ್ನು ಉತ್ತರ ಭಾರತದಿಂದ ಬಂದಿರುವ ಕಾರ್ಮಿಕರು ತುಂಬುತ್ತಿದ್ದು, ಪ್ರತಿ ಕುಟುಂಬ ಕನಿಷ್ಠ 400 ರಿಂದ 600 ಕೆಜಿರವರೆಗೆ ಕಾಫಿ ಹಣ್ಣು ಕೊಯ್ಲು ನಡೆಸುತ್ತಿದೆ.

ಇದರಿಂದಾಗಿ ಪ್ರತಿ ದಿನ 2500 ರೂಗಳಿಂದ ಮೂರು ಸಾವಿರದವರೆಗೂ ಕೂಲಿ ಸಂಪಾದಿಸುತ್ತಿದ್ದು ಕಳೆದೊಂದು ತಿಂಗಳಿನಲ್ಲಿ ಕಾರ್ಮಿಕ ಕುಟುಂಬವೊಂದು 1ಲಕ್ಷ ರೂಪಾಯಿವರೆಗೆ ಸಂಪಾದನೆ ಮಾಡಿದೆ.

ಇನ್ನೂ ಕಾಫಿ ಮಾರುಕಟ್ಟೆಯಲ್ಲಿ ಹಮಾಲಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಉತ್ತರ ಕಾರ್ನಾಟಕದಿಂದಲೂ ಹೆಚ್ಚಿನ ಹಮಾಲಿಗಳು ಆಗಮಿಸಿದ್ದು ಪ್ರತಿಮೂಟೆ ಕಾಫಿ ಲೋಡ್ 10 ಅನ್‌ಲೋಡ್‌ಗೂ 10ರೂ ಪಡೆಯುತ್ತಿದ್ದಾರೆ. ಪ್ರತಿ ಹಮಾಲಿ ಪ್ರತಿದಿನ ಕನಿಷ್ಠ 300ರಿಂದ 400 ಚೀಲದವರೆಗೆ ಲೋಡ್ ಮಾಡುವ ಮೂಲಕ ೨ರಿಂದ ನಾಲ್ಕು ಸಾವಿರದವರೆಗೂ ಸಂಪಾದನೆ ಮಾಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು